ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಕುಟುಂಬ ಸದಸ್ಯರಿಗೆ ಮ್ಯಾಂಗೊ ಕುಲ್ಫಿ ತಯಾರಿಸುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ.
“ನಮ್ಮ ವಿವಾಹವಾರ್ಷಿಕೋತ್ಸವದ ಪ್ರಯುಕ್ತ ಸರ್ಪ್ರೈಸ್ ನೀಡುತ್ತಿದ್ದೇನೆ. ನಮ್ಮ 25 ನೇ ವಿವಾಹ ವಾರ್ಷಿಕೋತ್ಸವದಂದು ಮನೆಯಲ್ಲಿರುವ ಎಲ್ಲರಿಗೂ ಸರ್ಪ್ರೈಸ್ ನೀಡಲು ಈ ಮಾವಿನ ಹಣ್ಣಿನ ಕುಲ್ಫಿಯನ್ನು ತಯಾರಿಸಿದ್ದೇನೆ ” ಎಂದು ಸಚಿನ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.