ಮುಂಬೈ :ಕೊರೊನಾ ಸೋಂಕಿಗೊಳಗಾಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು.. 10 ವರ್ಷದ ಹಿಂದಿನ ಸಂಭ್ರಮ ಮೆಲುಕು! - ಸಚಿನ್ ಕೊರೊನಾ
11:05 April 02
ಮಾರ್ಚ್ 27ರಂದು ತಮಗೆ ಕೋವಿಡ್ ತಗುಲಿರುವುದಾಗಿ ದೃಢಪಡಿಸಿದ್ದ ಸಚಿನ್ ತೆಂಡೂಲ್ಕರ್, ಇದೀಗ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮಾಸ್ಟರ್ ಬ್ಲಾಸ್ಟರ್, "ನಿಮ್ಮ ಹಾರೈಕೆ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ಆಸ್ಪತ್ರೆಗೆ ದಾಖಲಾಗಿರುವೆ. ಕೆಲವೇ ದಿನಗಳಲ್ಲಿ ಗುಣಮುಖನಾಗಿ ಮನೆಗೆ ಮರಳುವೆ. ಎಲ್ಲರೂ ಕಾಳಜಿವಹಿಸಿ ಮತ್ತು ಸುರಕ್ಷಿತವಾಗಿರಿ" ಎಂದು ಹೇಳಿದ್ದಾರೆ.
ಹೆಚ್ಚಿನ ಓದಿಗೆ:ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ಗೆ ಕೊರೊನಾ ಸೋಂಕು ದೃಢ
2011ರಲ್ಲಿ ಭಾರತ ವಿಶ್ವಕಪ್ ಗೆದ್ದು ಇಂದಿಗೆ 10 ವರ್ಷವಾಗಿದೆ. "ಎಲ್ಲಾ ಭಾರತೀಯರು ಮತ್ತು ನನ್ನ ತಂಡದ ಆಟಗಾರರಿಗೆ ನಮ್ಮ ವಿಶ್ವಕಪ್‌ನ 10ನೇ ವಾರ್ಷಿಕೋತ್ಸವದ ಶುಭಾಶಯಗಳು" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 27ರಂದು ಸಚಿನ್, ತಮಗೆ ಕೋವಿಡ್ ಸೋಂಕು ತಗುಲಿರುವುದಾಗಿ ದೃಢಪಡಿಸಿದ್ದರಲ್ಲದೇ, ಹೋಂ ಕ್ವಾರಂಟೈನ್ಗೆ ಒಳಪಟ್ಟಿರುವುದಾಗಿ ತಿಳಿಸಿದ್ದರು.