ಮುಂಬೈ:24 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡವನ್ನ ಪ್ರತಿನಿಧಿಸಿ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್, ಕಾಡಿ ಬೇಡಿ ಓಪನ್ ಸ್ಥಾನ ಪಡೆದುಕೊಂಡಿದ್ದೆ ಎಂದಿದ್ದಾರೆ.
1994ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಸಚಿನ್ ತೆಂಡೂಲ್ಕರ್ ಓಪನರ್ ಸ್ಥಾನದಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿ ಎಂದು ಬೇಡಿಕೊಂಡಿದ್ದೆ ಎಂದಿದ್ದಾರೆ. ಒಂದೇ ಒಂದು ಅವಕಾಶ ನೀಡಿ, ನಾನು ಇದರಲ್ಲಿ ಫೇಲ್ ಆದರೆ ಮತ್ತೆ ಎಂದಿಗೂ ನಿಮ್ಮ ಬಳಿ ಬರೋದಿಲ್ಲ ಎಂದು ಓಪನರ್ ಸ್ಥಾನಕ್ಕಾಗಿ ಕೇಳಿಕೊಂಡಿದ್ದೆ ಎಂದಿದ್ದಾರೆ.