ಹೈದರಾಬಾದ್:ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿರುವುದಕ್ಕೆ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನವನ್ನು ಸಚಿನ್ ತೆಂಡೂಲ್ಕರ್ ಡಿಕೋಡ್ ಮಾಡಿದ್ದು, ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಫುಲ್ ಸ್ಟ್ರೆಚ್ಡ್ ಫಾರ್ವರ್ಡ್ ಅನುಪಸ್ಥಿತಿ ಕಂಡು ಬಂದಿತ್ತು ಎಂದು ಅವರು ಹೇಳಿದ್ದಾರೆ.
ವೇಗದ ಬೌಲರ್ಗಳನ್ನು ಎದುರಿಸುವಾಗ ಬ್ಯಾಟ್ಸ್ಮನ್ಗಳು ಫುಲ್ ಸ್ಟ್ರಚ್ಡ್ ಫಾರ್ವರ್ಡ್ ಸ್ಟ್ರೈಡ್ ಮೂಲಕ ಡಿಫೆನ್ಸ್ ಆಡಬೇಕಿರುತ್ತದೆ. ಆದರೆ, ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಅದು ಕಂಡುಬರಲಿಲ್ಲ ಎಂಬುದನ್ನ ಸಚಿನ್ ಗುರುತಿಸಿದ್ದಾರೆ. ಭಾರತ ತಂಡ ಮೊದಲ ಪಂದ್ಯದಲ್ಲಿ 8 ವಿಕೆಟ್ಗಳ ಸೋಲುಕಂಡಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆವು, ಜೊತೆಗೆ ಆರಂಭಿಕ ಆಘಾತದಲ್ಲಿ ತ್ವರಿತವಾಗಿ ಚೇತರಿಸಿಕೊಳ್ಳುವುದನ್ನ ನಾವು ತೋರಿಸಿದ್ದೆವು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ನಮ್ಮ ಬ್ಯಾಟ್ಸ್ಮನ್ಗಳು ಹೆಚ್ಚು ಆಟವಾಡಲಿಲ್ಲಲ್ಲ. ಅವರು ಸಂಪೂರ್ಣ ಲಯ ಕಳೆದುಕೊಂಡರು. ಅಲ್ಲದೇ ಚೆಂಡಿನ ಚಲನೆ ಕಡಿಮೆಯಿತ್ತು, ಈ ಕಾರಣದಿಂದ ನಮ್ಮ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರು ಎಂದು ಸಚಿನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.