ಹೈದರಾಬಾದ್:ಟೀಂ ಇಂಡಿಯಾ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ದಾಖಲೆ ಹೊಂದಿದ್ದಾರೆ. ಪದಾರ್ಪಣೆ ಮಾಡಿದಾಗಿನಿಂದ ಆಸೀಸ್ ನೆಲದಲ್ಲಿ ಸಚಿನ್ ಹಲವು ದಾಖಲೆ ನಿರ್ಮಣ ಮಾಡಿದ್ದು, ಅವುಗಳ ಕುರಿತ ರ‍್ಯಾಪಿಡ್ ಫೈರ್ನಲ್ಲಿ ಸಚಿನ್ ಉತ್ತರಿಸಿದ್ದಾರೆ.
ಸಚಿನ್ ಅವರ ಯೂಟ್ಯೂಬ್ ಚಾನಲ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಸಚಿನ್ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. 'ನಾನು ಆಸ್ಟ್ರೇಲಿಯಾ ಪ್ರವಾಸ ಇಷ್ಟಪಡುತ್ತಿದ್ದೆ ಮತ್ತು ಸಿಡ್ನಿ ಖಂಡಿತವಾಗಿಯೂ ನನ್ನ ನೆಚ್ಚಿನ ಮೈದಾನವಾಗಿದೆ. ಆಸ್ಟ್ರೇಲಿಯಾದಲ್ಲಿ ನನ್ನ ಅಂಕಿ - ಅಂಶಗಳ ಬಗ್ಗೆ ನನ್ನ ತಂಡವು ನನ್ನನ್ನು ಪ್ರಶ್ನಿಸಿದಾಗ ತುಂಬಾ ಖುಷಿಯಾಯಿತು. ನಾನು ಎಷ್ಟು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದೆ?' ಎಂದು ಸಚಿನ್ ಬರೆದುಕೊಂಡಿದ್ದಾರೆ.