ಮುಂಬೈ: ಮುಂಬರುವ ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಆಡಬಾರದು ಎಂದು ಎಲ್ಲ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ, ಭಾರತ ಕ್ರಿಕೆಟ್ ತಂಡದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಮಾತ್ರ ಪಾಕ್ ವಿರುದ್ಧ ಆಡೋಣ ಎಂದಿದ್ದಾರೆ.
ವಿಶ್ವಕಪ್ನಲ್ಲಿ ಪಾಕ್ ಜೊತೆ ಆಡೋಣ.. ಸಚಿನ್ ಮಾತಿನ ಮರ್ಮವೇನು..? - news kannada
ಪುಲ್ವಾಮಾ ದಾಳಿ ಹಿನ್ನೆಲೆ ಪಾಕ್ಗೆ ಬುದ್ಧಿ ಕಲಿಸಬೇಕು ಎಂದ ನಿರ್ಧಾರಕ್ಕೆ ಬಂದ ಕ್ರಿಕೆಟ್ ಅಭಿಮಾನಿಗಳು, ಮುಂಬರುವ ವಿಶ್ವಕಪ್ನಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಆಡಬಾರದು ಎಂದು ಹೇಳಿದ್ದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಭಿನ್ನ ಟ್ವಿಟ್ವೊಂದನ್ನು ಮಾಡಿದ್ದಾರೆ.
ಹೌದು ಭಾರತ ಪಾಕಿಸ್ತಾನ ವಿರುದ್ಧ ಪಂದ್ಯ ಆಡದೇ ಇರುವುದು ಭಾರತ ರತ್ನ ಸಚಿನ್ ತೆಂಡೂಲ್ಕರ್ಗೆ ಇಷ್ಟವಿಲ್ಲವಂತೆ. ಅವರು ಹಾಗೇ ಹೇಳಿರುವುದಕ್ಕೆ ಕಾರಣವೂ ಇದೆ. ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತವೇ ಪಾರುಪತ್ಯ ಮೆರೆದಿದೆ. ಅವರ ವಿರುದ್ಧ ಗೆಲ್ಲುವುದು ನಮಗೆ ಪ್ರತಿಷ್ಠೆಯ ವಿಷಯ, ಹಾಗಾಗಿಯೇ ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನ ಮತ್ತೊಮ್ಮೆ ಸೋಲಿಸೋಣ ಅಂತಾ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧ ಪಂದ್ಯ ಆಡದೇ ಅವರಿಗೆ ವಿನಾಕಾರಣ 2 ಅಂಕ ನೀಡುವುದು ನನಗೆ ಇಷ್ಟವಿಲ್ಲ, ಅವರ ವಿರುದ್ಧ ಆಡಿ ಮತ್ತೊಮ್ಮೆ ಸೋಲಿಸೋಣ.. ಇದೆಲ್ಲದರ ಹೊರತಾಗಿ ನನಗೆ ಭಾರತವೇ ಮುಖ್ಯ ಹಾಗಾಗಿ ನನ್ನ ದೇಶ ಯಾವ ತೀರ್ಮಾನ ಕೈಗೊಂಡರೂ ಅದಕ್ಕೆ ಹೃದಯ ಪೂರ್ವಕವಾಗಿ ಬೆಂಬಲ ಸೂಚಿಸುತ್ತೇನೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.