ವಡೋದರ:ದಕ್ಷಿಣ ಆಫ್ರಿಕಾ ಹಾಗೂ ಭಾರತ ಮಹಿಳಾ ತಂಡದ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತೀಯ ವನಿತೆಯರು ಎಂಟು ವಿಕೆಟ್ಗಳ ಸುಲಭ ಗೆಲುವು ದಾಖಲಿಸಿದ್ದಾರೆ.
ದಕ್ಷಿಣ ಆಫ್ರಿಕಾ ನೀಡಿದ 165 ರನ್ಗಳ ಗುರಿಯನ್ನು ಬೆನ್ನತ್ತಿದ ಆತಿಥೇಯರು 41.4 ಓವರ್ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿಮುಟ್ಟಿ ಗೆಲುವಿನ ನಗೆ ಬೀರಿದೆ. ಚೊಚ್ಚಲ ಪಂದ್ಯವನ್ನಾಡಿದ ಪ್ರಿಯಾ ಪುನಿಯಾ ಆಕರ್ಷಕ ಅರ್ಧಶತಕ(75*) ಹಾಗೂ ಜೆಮಿಯಾ ರೋಡ್ರಿಗಸ್(55) ರನ್ ತಂಡದ ಗೆಲುವಿಗೆ ಸಹಕಾರಿಯಾಯಿತು.