ಕರ್ನಾಟಕ

karnataka

ETV Bharat / sports

ಹರಿಣಗಳ ವಿರುದ್ಧ ರೋಚಕ ಜಯ: ಟಿ-20 ಸರಣಿ ಗೆದ್ದ ಆಂಗ್ಲರ ತಂಡ! - ಇಂಗ್ಲೆಂಡ್​ ದಕ್ಷಿಣ ಆಫ್ರಿಕಾ ಟಿ20 ಪಂದ್ಯ

ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಟಿ-20 ಪಂದ್ಯದಲ್ಲಿ ಇಯಾನ್​ ಮಾರ್ಗನ್ ಪಡೆ 5 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ.

SA VS ENG T20,ಟಿ-20 ಸರಣಿ ಗೆದ್ದ ಇಂಗ್ಲೆಂಡ್ ತಂಡ
ಟಿ-20 ಸರಣಿ ಗೆದ್ದ ಇಂಗ್ಲೆಂಡ್ ತಂಡ

By

Published : Feb 17, 2020, 8:17 AM IST

ಸೆಂಚುರಿಯನ್: ಇಯಾನ್ ಮಾರ್ಗಾನ್ ಅವರ ಅಜೇಯ 57 ರನ್​ಗಳ ನೆರವಿನಿಂದ 223 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ-20 ಪಂದ್ಯವನ್ನ 5 ವಿಕೆಟ್​ಗಳ ಅಂತರದಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದೆ.

ಹೆನ್​ರಿಚ್​ ಕ್ಲಾಸೆನ್

ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 223 ರನ್​​ಗಳ ಬೃಹತ್​ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ಜಾಸನ್ ರಾಯ್​ ವಿಕೆಟ್​ ಕಳೆದುಕೊಂಡಿತು. ಈ ವೇಳೆ ಜೊತೆಯಾದ ಬಟ್ಲರ್ (57) ಮತ್ತು ಜಾನಿ ಬೈರ್ಸ್ಟೋವ್​ (64) ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು.

ನಂತರ ಬಂದ ಇಯಾನ್ ಮಾರ್ಗನ್ ಕೇವಲ 22 ಎಸೆತಗಳಲ್ಲಿ 7 ಸಿಕ್ಸರ್​ ಸಹಿತ 57 ರನ್​ ಗಳಿಸುವ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಈ ಹಿಂದೆ 21 ಎಸೆಗಳಲ್ಲಿ ಅರ್ಧಶತಕ ಸಿಡಿಸಿದ್ದ ಮಾರ್ಗನ್ ಮತ್ತೆ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತನ್ನದೇ ದಾಖಲೆ ಸರಿಗಟ್ಟಿದರು. 19.1 ಓವರ್​ಗಳಲ್ಲಿ 223 ರನ್​ಗಳಿಸಿದ ಇಂಗ್ಲೆಂಡ್ ತಂಡ ಅತಿಥೇಯ ತಂಡದಿಂದ ಟಿ-20 ಸರಣಿ ವಶಪಡಿಸಿಕೊಂಡಿತು. ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 2 ವಿಕೆಟ್ ಪಡೆದರು.

ಟಿ-20 ಸರಣಿ ಗೆದ್ದ ಇಂಗ್ಲೆಂಡ್ ತಂಡ

ಇದಕ್ಕೂ ಮೊದಲು ಟಾಸ್​ಗೆದ್ದು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಟಗಾರರಾದ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ಒದಗಿಸಿದ್ರು. ಮೊದಲನೇ ವಿಕೆಟ್​​ಗೆ ಈ ಜೋಡಿ 84 ರನ್​ ಕಲೆಹಾಕಿ ಭದ್ರ ಅಡಿಪಾಯ ಹಾಕಿದ್ರು.

ನಂತರ ಬಂದ ಕ್ಲಾಸೆನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ರು. ಕೇವಲ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ 66 ರನ್​ ಸಿಡಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದ್ರು. ನಿಗದಿತ 20 ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ 222ರನ್​ ಗಳಿಸಿತ್ತು. ಇಂಗ್ಲೆಂಡ್​ ಪರ ಟಾಮ್ ಕರನ್ ಮತ್ತು ಬೆನ್​ ಸ್ಟೋಕ್ಸ್​ ತಲಾ 2 ವಿಕೆಟ್ ಪಡೆದು ಮಿಂಚಿದ್ರು.

ABOUT THE AUTHOR

...view details