ಕರ್ನಾಟಕ

karnataka

By

Published : Sep 29, 2019, 8:31 PM IST

ETV Bharat / sports

ಕಾಂಗ್ರೆಸ್​ನ ಶಶಿ ತರೂರ್​ರನ್ನು ಮಣಿಸಲು ನಾನು ಸಿದ್ಧ ಎಂದ ಕೇರಳ ಕ್ರಿಕೆಟಿಗ!

ಭಾರತ ಕ್ರಿಕೆಟ್​ ಕಂಡ ಅಗ್ರೆಸ್ಸಿವ್​​​ ಆಟಗಾರನಾಗಿದ್ದ ಶ್ರೀಶಾಂತ್​ ಕಳೆದ ಕೇರಳ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ 2024ರ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಶಿ ತರೂರ್​ ಅವರನ್ನು ಸೋಲಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.

S Sreesanth

ತಿರುವನಂತಪುರಂ: ಭಾರತ ತಂಡ ಗೆದ್ದಿರುವ 2 ವಿಶ್ವಕಪ್​ ತಂಡದಲ್ಲಿದ್ದ ಶ್ರೀಶಾಂತ್​ 2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕ ಶಶಿ ತರೂರ್​ ಅವರನ್ನು ಸೋಲಿಸಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಭಾರತ ಕ್ರಿಕೆಟ್​ ಕಂಡ ಅಗ್ರೆಸ್ಸಿವ್​​ ಆಟಗಾರನಾಗಿದ್ದ ಶ್ರೀಶಾಂತ್​ ಕಳೆದ ಕೇರಳ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ 2024ರ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್​ ನಾಯಕ​ ಶಶಿ ತರೂರ್​ ಅವರನ್ನು ಸೋಲಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.

ಶಶಿ ತರೂರ್​ ಈಗಾಗಲೆ ಮೂರು ಬಾರಿ ತಿರುವನಂತಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ. ಮನಮೋಹನ್ ಸಿಂಗ್​ ಅವರ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 11 ಸಾವಿರ ಮತಗಳಿಂದ ಕಾಂಗ್ರೇಸ್​ ಅಭ್ಯರ್ಥಿಯ ವಿರುದ್ಧ ಸೋಲನುಭವಿಸಿದ್ದ ಶ್ರೀಶಾಂತ್,​ ತರೂರ್​ ಅಂತಹ ದೊಡ್ಡ ರಾಜಕಾರಣಿಯ ವಿರುದ್ಧ ಚುನಾವಣೆಗೆ ನಿಲ್ಲಲು ತಯಾರಾಗುತ್ತಿರುವುದು ಆಶ್ಚರ್ಯಕರ ವಿಷಯವಾಗಿದೆ.

ಎಸ್​.ಶ್ರೀಶಾಂತ್​

ನಾನೊಬ್ಬ ಸಾಮನ್ಯ ವ್ಯಕ್ತಿಯಾಗಿ ಶಶಿ ತರೂರ್​ ಅವರ ಬಹುದೊಡ್ಡ ಅಭಿಮಾನಿ. ಆದರೆ ಅವರನ್ನು ಖಂಡಿತ ತಿರುವನಂತಪುರಂ ಕ್ಷೇತ್ರದಿಂದ ಅವರನ್ನು ಚುನಾವಣೆಯಲ್ಲಿ ಸೋಲಿಸಬಲ್ಲೆ. ನಾನೀಗ ಸ್ವತಂತ್ರ ಹಾಗೂ ನಿಯಂತ್ರಣದಲ್ಲಿದ್ದೇನೆ. ನಾನು ಸಿನಿಮಾ, ಸಂಗೀತ, ಸಾಹಿತ್ಯ , ವೆಬ್​ ಸೀರೀಸ್, ಕ್ರಿಕೆಟ್​ ಹಾಗೂ ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೇನೆ ಎಂದು ಕಳೆದ ಹಿಂದಿ ಬಿಗ್​ಬಾಸ್​ ರನ್ನರ್​ ಆಪ್​ ಕೂಡ ಆಗಿರುವ ಶ್ರೀಶಾಂತ್​ ಹೇಳಿಕೊಂಡಿದ್ದಾರೆ.

ಶ್ರೀಶಾಂತ್​ 2007ರ ಟಿ-20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕಪ್​ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರಾಗಿದ್ದರು. ಇವರು ಭಾರತ ತಂಡದ ಪರ 2005ರಿಂದ 2011ರವರೆಗೆ ಪ್ರತಿನಿಧಿಸಿ ಎಲ್ಲಾ ವಿಭಾಗದ ಕ್ರಿಕೆಟ್​ನಿಂದ 169 ವಿಕೆಟ್​ ಕಬಳಿಸಿದ್ದಾರೆ. ಆದರೆ ಐಪಿಎಲ್​ ಮ್ಯಾಚ್​ ಫಿಕ್ಸಿಂಗ್​ನಿಂದ ಬಿಸಿಸಿಐನಿಂದ ಅಜೀವ ಶಿಕ್ಷೆಗೊಳಗಾಗಿದ್ದ ಅವರನ್ನು ನಿರಪರಾಧಿ ಎಂದು ಸುಪ್ರಿಂ ಕೋರ್ಟ್​ ತೀರ್ಪು ನೀಡಿದ ಬೆನ್ನಲ್ಲೇ ಬಿಸಿಸಿಐ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿತ್ತು.

ABOUT THE AUTHOR

...view details