ಕೊಚ್ಚಿ:ಭಾರತದ ವಿವಾದಿತ ಬೌಲರ್ ಎಸ್. ಶ್ರೀಶಾಂತ್ ಕ್ರಿಕೆಟ್ಗೆ ಮತ್ತೊಮ್ಮೆ ಕಮ್ಬ್ಯಾಕ್ ಮಾಡಲು ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಬೌಲಿಂಗ್ ಪ್ರ್ಯಾಕ್ಟಿಸ್ ಮಾಡುತ್ತಿರುವ ಅವರಲ್ಲಿ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಉತ್ಕಟ ಬಯಕೆ ಎದ್ದು ಕಾಣುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಶ್ರೀಶಾಂತ್ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕೊಚ್ಚಿಯ ಒಳಾಂಗಣ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುತ್ತಿದ್ದ ಅವರು ಕೇರಳ ರಣಜಿ ತಂಡದ ಕ್ಯಾಪ್ಟನ್ ಸಚಿನ್ ಬೇಬಿ ಅವರನ್ನು ಕ್ಲೀನ್ ಬೋಲ್ಡ್ ಮಾಡಿ ಗಮನ ಸೆಳೆದರು.