ಕರ್ನಾಟಕ

karnataka

ETV Bharat / sports

ಪಂಜಾಬ್​ ವಿರುದ್ಧ 9 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಸಿಎಸ್​ಕೆ

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ದೀಪಕ್ ಹೂಡ(62) ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್​ಗಳಿಸಿತ್ತು. 154 ರನ್​ಗಳ ಗುರಿ ಪಡೆದ ಸಿಎಸ್​ಕೆ 18.5 ಓವರ್​ಗಳಲ್ಲಿ ತಲುಪುವ ಮೂಲಕ ಪಂಜಾಬ್​ ಪ್ಲೇ ಆಫ್​ ಕನಸನ್ನು ನುಚ್ಚುನೂರು ಮಾಡಿದೆ.

ಪಂಜಾಬ್​ ವಿರುದ್ಧ ಸಿಎಸ್​ಕೆಗೆ ಗೆಲುವು
ಪಂಜಾಬ್​ ವಿರುದ್ಧ ಸಿಎಸ್​ಕೆಗೆ ಗೆಲುವು

By

Published : Nov 1, 2020, 8:15 PM IST

Updated : Nov 1, 2020, 9:10 PM IST

ಅಬುಧಾಬಿ: ಬೌಲರ್​ಗಳ ಅತ್ಯುತ್ತಮ ಪ್ರದರ್ಶನ ಮತ್ತು ರುತುರಾಜ್ ಗಾಯಕ್ವಾಡ್​ ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್​ ಕಿಂಗ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ 9 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಟೂರ್ನಿಯಿಂದ ಹೊರಹೋಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ದೀಪಕ್ ಹೂಡ(62) ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್​ಗಳಿಸಿತ್ತು. 154 ರನ್​ಗಳ ಗುರಿ ಪಡೆದ ಸಿಎಸ್​ಕೆ 18.5 ಓವರ್​ಗಳಲ್ಲಿ ತಲುಪುವ ಮೂಲಕ ಪಂಜಾಬ್​ ಪ್ಲೇ ಆಫ್​ ಕನಸನ್ನು ನುಚ್ಚುನೂರು ಮಾಡಿದೆ.

ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್​ ಹಾಗೂ ಪ್ಲೆಸಿಸ್​ ಮೊದಲ ವಿಕೆಟ್​ಗೆ 82 ರನ್​ಗಳ ಜೊತೆಯಾಟ ನೀಡಿದರು.

ಪ್ಲೆಸಿಸ್​ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 48 ರನ್​ಗಳಿಸಿ ಔಟಾದರು. ಆದರೆ ರಾಯುಡು ಜೊತೆ ಸೇರಿಕೊಂಡ ಯುವ ಬ್ಯಾಟ್ಸ್​ಮನ್ ಗಾಯಕ್ವಾಡ್​ 2ನೇ ವಿಕೆಟ್​ಗೆ ಮುರಿಯದ 72 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ರಾಯಡು 30 ಎಸೆತ​ಗಳಲ್ಲಿ ಅಜೇಯ 30 ರನ್​ ಗಳಿಸಿದರೆ, ಗಾಯಕ್ವಾಡ್​ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ ಅಜೇಯ 62 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ಈ ಪಂದ್ಯದ ಸೋಲಿನೊಂದಿಗೆ ಪಂಜಾಬ್​ ಟೂರ್ನಿಯಿಂದ ಹೊರಬಿದ್ದ 2ನೇ ತಂಡವಾಯಿತು. ಈ ಮೊದಲು ಸಿಎಸ್​ಕೆ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತ್ತು.

Last Updated : Nov 1, 2020, 9:10 PM IST

ABOUT THE AUTHOR

...view details