ದುಬೈ :ಸಿಎಸ್ಕೆ ತಂಡದ ಪ್ರಮುಖ ಆಟಗಾರನಾಗಿದ್ದ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್ನಿಂದ ಹೊರ ಬಂದಿದ್ದಾರೆ. ಆದರೆ, ಅವರ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿಎಸ್ಕೆ ಮಾಲೀಕ ಶ್ರೀನಿವಾಸನ್, ರೈನಾ ಬದಲು ಆಟಗಾರನನ್ನೂ ಹೆಸರಿಸಿ ಶಾಕ್ ನೀಡಿದ್ದಾರೆ.
ಶನಿವಾರ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಸಿಎಸ್ಕೆ ಸಿಇಒ ಟ್ವೀಟ್ ಮೂಲಕ ತಿಳಿಸಿದ್ದರು. ಆದರೆ, ಕೆಲ ವರದಿಗಳ ಪ್ರಕಾರ, ರೈನಾಗೆ ಬಯೋ ಸೆಕ್ಯೂರ್ ವಲಯದ ಬಗ್ಗೆ ಅಸಮಾಧಾನವಿದೆ ಎಂದಿದ್ದರೆ, ಮತ್ತೆ ಕೆಲವು ವರದಿಗಳು ಧೋನಿಗೆ ನೀಡಿದ್ದಂತಹ ಸೌಲಭ್ಯವುಳ್ಳ ರೂಮ್ ನೀಡದಿರುವುದಕ್ಕೆ ರೈನಾ ಬೇಸರವ್ಯಕ್ತಪಡಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿವೆ.