ಕರ್ನಾಟಕ

karnataka

ETV Bharat / sports

ಕರಾಚಿ ಕಿಂಗ್ಸ್​ ಪರ ಮುಂಬೈ ಇಂಡಿಯನ್ಸ್​ ಗ್ಲೌಸ್​ ಧರಿಸಿ ಬ್ಯಾಟ್​ ಬೀಸಿದ ರುದರ್​​ಫೋರ್ಡ್​​ - Karachi Kings superstar Sherfane Rutherford

ಪಿಎಸ್​ಎಲ್​​ನ ಕರಾಚಿ ಕಿಂಗ್ಸ್​ ಪರ ಕಣಕ್ಕಿಳಿದ ಶೆರ್ಫಾನೆ ರುದರ್​ಫೋರ್ಡ್​​​​ ಅವರು ಮುಂಬೈ ಇಂಡಿಯನ್ಸ್​ ಗ್ಲೌಸ್​ ಧರಿಸಿ ಬ್ಯಾಟ್​ ಬೀಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗಿದ್ದಾರೆ.

Rutherford dons Mumbai Indians' gloves in PSL, fans troll Karachi Kings
ಶೆರ್ಫಾನೆ ರುದರ್​ಫೋರ್ಡ್

By

Published : Nov 17, 2020, 12:52 PM IST

ಹೈದರಾಬಾದ್​: ಪಾಕಿಸ್ತಾನ ಪ್ರೀಮಿಯರ್​ ಲೀಗ್​​ನ (ಪಿಎಸ್​​ಎಲ್​​) ಕರಾಚಿ ಕಿಂಗ್ಸ್​​ ಸೂಪರ್​​ಸ್ಟಾರ್ ತಂಡದ ಪರ ಬ್ಯಾಟ್​ ಬೀಸಿರುವ ವೆಸ್ಟ್​​ ಇಂಡೀಸ್​​​ ಆಟಗಾರ ಶೆರ್ಫಾನೆ ರುದರ್​ಫೋರ್ಡ್​​ ಅವರು ಮುಂಬೈ ಇಂಡಿಯನ್ಸ್​​​ ತಂಡದ ಅಭಿಮಾನಿಗಳ ಟ್ರೋಲ್​​ಗೆ ಗುರಿಯಾಗಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ರುದರ್​​​ಫೋರ್ಡ್​​​ ಅದೇ ತಂಡದ ಗ್ಲೌಸ್​​​ (ಕೈಗವಸು) ಧರಿಸಿ ಪಿಎಸ್​​​ಎಲ್​​ ಕ್ವಾಲಿಫೈಯರ್-1 ಮುಲ್ತಾನ್​ ಸುಲ್ತಾನ್​ ವಿರುದ್ಧದ ಪಂದ್ಯದ ಸಮಯದಲ್ಲಿ ಕಣಕ್ಕಿಳಿದಿದ್ದರು. ರುದರ್​​ಫೋರ್ಡ್​​​ ಐಪಿಎಲ್ ಅನ್ನು ಮರೆತಿಲ್ಲ. ಬಹುಶಃ ಅವರಿನ್ನೂ ಐಪಿಎಲ್​ ಗುಂಗಿನಲ್ಲೇ ಇದ್ದಾರೆ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಕಾಶಿ ಎಂಬಾತ ಟ್ವೀಟ್​ ಮಾಡಿದ್ದು, ಆಟಗಾರರಿಗೆ ಗ್ಲೌಸ್​ ಕೊಡಿಸುವ ಯೋಗ್ಯತೆ ಇಲ್ಲ. ಇವರಿಗೆಲ್ಲಾ ಕಾಶ್ಮೀರ ಬೇಕಾ ಎಂದು ವ್ಯಂಗ್ಯವಾಡಿದ್ದಾನೆ. ಪ್ರಾಂತಿಕ್​ ಚಕ್ರಭರ್ತಿ ಅವರು ಪೂರ್​​ ಪಾಕಿಸ್ತಾನ ಎಂದಿದ್ದಾರೆ. ಸ್ವಂತ ಪರಿಕರಗಳಿಲ್ಲದೆಯೇ ಪಾಕಿಸ್ತಾನ ಟೂರ್ನಿ ನಡೆಸುತ್ತಿದೆ. ಅವರೇನಿದ್ದರೂ ಚೀನಾ ಉತ್ಪಾದಿಸುವ ಗ್ಲೌಸ್​​ಗಳನ್ನೇ ಬಳಸುತ್ತಾರೆ ಎಂದು ಪ್ರತೀಕ್​ ಸಕ್ಸೇನಾ ಟ್ವೀಟ್​ ಮಾಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಕರಾಚಿ ಕಿಂಗ್ಸ್​ ತಂಡವನ್ನು ಟ್ರೋಲ್​ ಮಾಡಿದ್ದಾರೆ.

ಐಪಿಎಲ್‌ನ 13 ನೇ ಆವೃತ್ತಿಯಲ್ಲಿ ಎಡಗೈ ಬ್ಯಾಟ್ಸ್‌ಮನ್ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಆದರೆ, ಈ ಬಾರಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಮತ್ತು ಈಗ ಕರಾಚಿ ಕಿಂಗ್ಸ್ ಪರ ಮೈದಾನಕ್ಕಿಳಿದಿದ್ದಾರೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ರುದರ್​ಫೋರ್ಡ್ ಕೇವಲ ಒಂದು ರನ್ ಗಳಿಸಿ ಔಟಾದರು.

ಕಳೆದ ವಾರ ವಿಂಡೀಸ್ ಬ್ಯಾಟ್ಸ್‌ಮನ್ ಮುಂಬೈ ಇಂಡಿಯನ್ಸ್ ಕಿಟ್‌ನೊಂದಿಗೆ ಪಾಕಿಸ್ತಾನಕ್ಕೆ ಬಂದಿಳಿದಿದ್ದರು. ಮಂಗಳವಾರ ಸಂಜೆ ನಡೆಯುವ ಫೈನಲ್‌ನಲ್ಲಿ ಕರಾಚಿ ಕಿಂಗ್ಸ್ ತಂಡವು ಲಾಹೋರ್ ಖಲಂಡಾರ್ಸ್‌ ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಇದೇ ಮೊದಲ ಬಾರಿಗೆ ಪಿಎಸ್​​​ಎಲ್​​ನಲ್ಲಿ ಫೈನಲ್​​ಗೇರಿವೆ.

ABOUT THE AUTHOR

...view details