ಡಾಕಾ:ದಕ್ಷಿಣ ಆಫ್ರಿಕಾದ ಮಾಜಿ ಕೋಚ್ ರಸೆಲ್ ಡೊಮಿಂಗೊ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ವಿಶ್ವಕಪ್ ಮುಗಿಯುತ್ತಿದ್ದಂತೆ ಬಾಂಗ್ಲದೇಶ ಕ್ರಿಕೆಟ್ ಮಂಡಳಿ ಎಲ್ಲಾ ಕೋಚ್ ವಿಭಾಗವನ್ನು ಬದಲಾಯಿಸಲು ನಿರ್ಧರಿಸಿತ್ತು. ಹಾಗಾಗಿ ಹಂಗಾಮಿ ಕೋಚ್ಆಗಿ ಬಾಂಗ್ಲಾದೇಶದ ಮಾಜಿ ಆಲ್ರೌಂಡರ್ ಖಲಿದ್ ಮಹ್ಮದ್ರನ್ನು ನೇಮಿಸಿ ಶ್ರೀಲಂಕಾ ಸರಣಿಗೆ ಕಳುಹಿಸಲಾಗಿತ್ತು.
ಇದೀಗ 25 ವರ್ಷಕ್ಕೆ ಸ್ಥಾನ ಅಲಂಕರಿಸಿದ್ದ ಡೊಮಿಂಗೊ ಘಟಾನುಘಟಿಗಳಾದ ಮೈಕ್ ಹೆಸನ್, ಪಾಕ್‌ನ ಮಾಜಿ ಕೋಚ್ ಮಿಕಿ ಆರ್ಥರ್ ಹಾಗೂ ಹಂಗಾಮಿ ಕೋಚ್ ಖಲಿದ್ ಮಹ್ಮದ್ರನ್ನು ಹಿಂದಿಕ್ಕಿ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಡೊಮಿಂಗೊ ಈ ಮೊದಲು ದಕ್ಷಿಣ ಆಫ್ರಿಕಾ ಅಂಡರ್19, ವಾರಿಯರ್ಸ್ ಟಿ20 ಗಾಗೂ 40 ಓವರ್ ಫ್ರಾಂಚೈಸಿಯ ಕೋಚ್ ಹಾಗೂ ಸೀನಿಯರ್ ದಕ್ಷಿಣ ಆಫ್ರಿಕಾ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವವಿದೆ. ಇವರು ಕೋಚ್ ಆಗಿದ್ದ ಸಂದರ್ಭದಲ್ಲಿ ಹರಿಣಗಳ ಪಡೆ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶ ಮಾಡಿತ್ತು.
ಡೊಮಿಂಗೊ ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ನೈಲ್ ಮೆಕೆಂಜಿ ಹಾಗೂ ಬೌಲಿಂಗ್ ಕೋಚ್ ಚಾರ್ಲ್ ಲಾಂಗ್ವೆಲ್ಡ್ಟ್ ಮುಂದುವರಿದಿದ್ದಾರೆ. ಈ ಮೂವರು ಸಹಾ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕೋಚ್ಗಳಾಗಿರುವುದು ಗಮನಾರ್ಹ.