ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕಿಂಗ್ಸ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಮುಂಬೈನ ವಾಖೆಂಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ರಾಹುಲ್ ನೇತೃತ್ವದ ಪಂಜಾಬ್ ಬ್ಯಾಟಿಂಗ್ ನಡೆಸುತ್ತಿದೆ.
ಪಂಜಾಬ್ ಕಿಂಗ್ಸ್ ಪರ ರಿಲೆ ಮೆರಿಡಿತ್, ಜೇ ರಿಚರ್ಡ್ಸನ್ ಮತ್ತು ಶಾರುಖ್ ಖಾನ್ ಪದಾರ್ಪಣೆ ಮಾಡಿದರೆ, ರಾಜಸ್ಥಾನ್ ರಾಯಲ್ಸ್ ಪರ ಮನನ್ ವೊಹ್ರಾ, ಮುಸ್ತಫಿಜುರ್ ರಹಮಾನ್, ಶಿವಂ ದುಬೆ, ಚೇತನ್ ಸಕಾರಿಯಾ ಪದಾರ್ಪಣೆ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಮನನ್ ವೊಹ್ರಾ ಇಂಗ್ಲೆಂಡ್ ಸ್ಟಾರ್ ಜೋಸ್ ಬಟ್ಲರ್ರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ವಿದೇಶಿ ಆಟಗಾರರಾಗಿ ಬಟ್ಲರ್ ಜೊತೆಗೆ ಬೆನ್ಸ್ಟೋಕ್ಸ್, ಕ್ರಿಸ್ ಮೋರಿಸ್ ಹಾಗೂ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವಕಾಶ ಪಡೆದಿದ್ದಾರೆ.