ಬೆಂಗಳೂರು :ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಹರಾಜಿಗೂ ಮುನ್ನ 12 ಆಟಗಾರರನ್ನು ಉಳಿಸಿಕೊಂಡಿದೆ. ಆಶ್ಚರ್ಯವೆಂದ್ರೆ, ಕ್ರಿಸ್ ಮೋರಿಸ್, ಮೊಯಿನ್ ಅಲಿ ಹಾಗೂ ಶುವಂ ದುಬೆಯನ್ನು ತಂಡದಿಂದ ಬಿಡುಗಡೆಗೊಳಿಸಿದೆ.
2021ರ ಐಪಿಎಲ್ಗೆ ಫೆಬ್ರವರಿ 14ರಂದು ಮಿನಿ ಹರಾಜು ನಡೆಯುವ ಸಾಧ್ಯತೆಯಿದೆ. ಅದಕ್ಕಾಗಿ ಎಲ್ಲಾ ಪ್ರಾಂಚೈಸಿಗೂ ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ವರದಿ ನೀಡಲು ಜನವರಿ 20 ಅಂತಿಮ ದಿನವಾಗಿತ್ತು. ಇದೀಗ ಆರ್ಸಿಬಿ ತನ್ನ 12 ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.
ಆದರೆ, 2020ರಲ್ಲಿ ನಿರೀಕ್ಷೆ ಮಾಡಿದಷ್ಟು ಪ್ರದರ್ಶನ ತೋರದ ಆಸ್ಟ್ರೇಲಿಯಾನದ ನಾಯಕ ಆ್ಯರೋನ್ ಫಿಂಚ್, ಕ್ರಿಸ್ ಮೋರಿಸ್, ಉದಾನ ಗುರುಕಿರಾತ್ ಮನ್ ತಂಡದಿಂದ ಕೈಬಿಟ್ಟಿದೆ. ಸ್ಟಾರ್ಗಳಾದ ಕೊಹ್ಲಿ, ಎಬಿಡಿ,ಚಹಾಲ್ ಜೊತೆಗೆ ಯುವ ಆಟಗಾರರಿಗೆ ಮಣೆ ಹಾಕಿರುವ ಆರ್ಸಿಬಿ, ಪಡಿಕ್ಕಲ್, ಸಿರಾಜ್, ಸೈನಿ, ಫಿಲಿಪ್ಪೆ ಹಾಗೂ ಕನ್ನಡಿಗ ಪವನ್ ದೇಶಪಾಂಡೆಯವರನ್ನು ರೀಟೈನ್ ಮಾಡಿಕೊಂಡಿದೆ.
ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರು