ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಲು ಸಜ್ಜುಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇದೀಗ ಕ್ರೀಡಾಭಿಮಾನಿಗಳಿಗೆ ಮೇಲಿಂದ ಮೇಲೆ ಸರ್ಪ್ರೈಸ್ ನೀಡ್ತಿದ್ದು, ಆರಂಭದಲ್ಲಿ ಲೋಗೋ ಬದಲಾವಣೆ ಮಾಡಿದ್ದ ಪ್ರಾಂಚೈಸಿ ತದನಂತರ ಜರ್ಸಿ ಸಹ ಬದಲಾವಣೆ ಮಾಡಿದೆ.
ಹೊಸ ಅವತಾರದಲ್ಲಿ ಅಬ್ಬರಿಸಲಿದೆ ಆರ್ಸಿಬಿ... 'ಈ ಸಲ ಕಪ್ ನಮ್ದೆ'! - ಆರ್ಸಿಬಿ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಲು ಸಜ್ಜುಗೊಳ್ಳುತ್ತಿರುವ ರಾಯಲ್ ಚಾಲೆಂಜರ್ಸ್, ಹೊಸ ಅವತಾರದೊಂದಿಗೆ ಕಣಕ್ಕಿಳಿಯಲು ಎಲ್ಲ ರೀತಿಯಿಂದಲ್ಲೂ ಸನ್ನದ್ಧಗೊಂಡಿದೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಾಗಿನಿಂದಲೂ ಕಪ್ ಗೆಲುವಿಗೆ ಹರಸಾಹಸ ಪಡುತ್ತಿರುವ ರಾಯಲ್ ಚಾಲೆಂಜರ್ಸ್ ಈ ಸಲ ಹೇಗಾದ್ರೂ ಮಾಡಿ ಟ್ರೋಫಿಗೆ ಮುತ್ತಿಕ್ಕುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ನೂತನ ಸಮವಸ್ತ್ರದೊಂದಿಗೆ ಆರ್ಸಿಬಿ ಪ್ಲೇಯರ್ಸ್ ಈ ಸಲ ಕಣಕ್ಕಿಳಿಯಲಿದ್ದಾರೆ. ಲೋಗೋ ಜೊತೆ ನೂತನ ಜೆರ್ಸಿ ತೊಟ್ಟಿರುವ ಎಬಿಡಿ, ವಿರಾಟ್, ಮತ್ತು ಚಹಾಲ್ ಫೋಟೋವನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ.
ಕಳೆದೆರಡು ದಿನಗಳ ಹಿಂದೆ ಆರ್ಸಿಬಿ ಫ್ರಾಂಚೈಸಿ, ಸೋಷಿಯಲ್ ಮೀಡಿಯಾ ಖಾತೆಗಳಿಂದ ಎಲ್ಲ ಫೋಟೋ ಡಿಲೀಟ್ ಮಾಡಿ ಕ್ರಿಕೆಟರ್ಸ್ ಅಚ್ಚರಿಗೆ ಕಾರಣವಾಗಿತ್ತು. ಆದರೆ, ಇದೀಗ ಹೊಸ ತಂಡ, ಹೊಸ ಲೋಗೋದೊಂದಿಗೆ ಅನಾವರಣಗೊಂಡಿದೆ. 2009, 20111 ಹಾಗೂ 2017ರಲ್ಲಿ ಫೈನಲ್ ತಲುಪಿದ್ದ ಆರ್ಸಿಬಿ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲಗೊಂಡು, ರನ್ನರ್ ಆಪ್ ಆಗಿತ್ತು. ಕಳೆದ ಸಲ ಕಪ್ ನಮ್ದೇ ಎಂಬ ಧ್ಯೇಯ ಘೋಷದೊಂದಿಗೆ ಕಣಕ್ಕಿಳಿದಿದ್ದ ಆರ್ಸಿಬಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.