ಹ್ಯಾಮಿಲ್ಟನ್: ರಾಸ್ ಟೇಲರ್ ಅವರ ಸ್ಫೋಟಕ ಶತಕದ ನೆರವಿನಿಂದ ಕಿವೀಸ್ ತಂಡ ಭಾರತ ತಂಡ ನೀಡಿದ್ದ 348 ರನ್ಗಳ ಬೃಹತ್ ಮೊತ್ತವನ್ನು 6 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಚೇಸ್ ಮಾಡಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಿ20 ಸರಣಿಯನ್ನು 5-0ಯಲ್ಲಿ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್ ತಂಡ 347 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ 1-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ(103) ಶತಕ, ರಾಹುಲ್(88) ಹಾಗೂ ಕೊಹ್ಲಿ (51)ಯ ಅರ್ಧಶತಕದ ನೆರವಿನಿಂದ 347 ರನ್ಗಳಿಸಿತ್ತು.
348ರನ್ಗಳ ಗುರಿ ಪಡೆದಿದ್ದ ಕಿವೀಸ್ಗೆ ಗಪ್ಟಿಲ್(32) ಹಾಗೂ ಹೆನ್ರಿ ನಿಕೋಲ್ಸ್(78) ಮೊದಲ ವಿಕೆಟ್ಗೆ 85 ರನ್ ಸೇರಿಸಿದರು. ಗಪ್ಟಿಲ್ರನ್ನು ವಿಕೆಟ್ ಪಡೆಯುವ ಮೂಲಕ ಶಾರ್ದೂಲ್ ಟಾಕೂರ್ ಭಾರತಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು. ನಂತ ಬಂದ ಟಾಮ್ ಬ್ಲಂಡೆಲ್ ಕೇವಲ 9 ರನ್ಗಳಿಸಿ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ನಿಕೋಲ್ಸ್ ಜೊತೆ ಸೇರಿಕೊಂಡ ಅನುಭವಿ ರಾಸ್ ಟೇಲರ್ 3ನೇ ವಿಕೆಟ್ಗೆ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ನಿಕೋಲ್ಸ್ ಇಲ್ಲದ ರನ್ ಕದಿಯಲು ಹೋಗಿ ಕೊಹ್ಲಿ ಮಾಡಿದ ಅದ್ಭುತ ರನ್ಔಟ್ಗೆ ಬಲಿಯಾದರು.
ತಂಡದ ಮೊತ್ತ 3 ವಿಕೆಟ್ ಕಳೆದುಕೊಂಡು 171ರನ್ ಇದ್ದಂತಹ ಸಂದರ್ಭದಲ್ಲಿ ಬ್ಯಾಟಿಂಗ್ ಬಂದ ನಾಯಕ ಟಾಮ್ ಲಾಥಮ್ ನಾಲ್ಕನೇ ವಿಕೆಟ್ಗೆ ಟೇಲರ್ ಜೊತೆಗೂಡಿ 136 ರನ್ಗಳ ಜೊತೆಯಾಟ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದರುಸಿದ ಲ್ಯಾಥಮ್ 48 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಬೌಂಡರಿ ನೆರವಿನಿಂದ 69 ರನ್ಗಳಿಸಿದರೆ, ಟೇಲರ್ ಕೇವಲ 84 ಎಸೆತಗಳಲ್ಲಿ 10 ಬೌಂಡರಿ 4 ಸಿಕ್ಸರ್ ಸೇರಿದಂತೆ 109ರನ್ಗಳಿಸಿ ಗೆಲುವಿನ ಗಡಿ ದಾಟಿಸಿದರು.
ಭಾರತದ ಮೊನಚು ಕಳೆದುಕೊಂಡ ಬೌಲಿಂಗ್ಅನ್ನು ಮನಬಂದಂತೆ ದಂಡಿಸಿದ ಕಿವೀಸ್ ಬ್ಯಾಟ್ಸ್ಮನ್ಗಳು 348 ರನ್ಗಳ ಬೃಹತ್ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದರು. ಈ ಮೂಲಕ ಭಾರತದ ವಿರುದ್ಧ ಗರಿಷ್ಠ ಮೊತ್ತ ಚೇಸ್ ಮಾಡಿದ ಎರಡನೇ ತಂಡ ಎನಿಸಿಕೊಂಡಿತು. ಇದಕ್ಕು ಮೊದಲು ಆಸ್ಟ್ರೇಲಿಯಾ ಕಳೆದ ವರ್ಷ 359 ರನ್ಗಳ ಮೊತ್ತವನ್ನು ಚೇಸ್ ಮಾಡಿ ಗೆದ್ದಿತ್ತು.
ಭಾರತದ ಪರ ಕುಲ್ದೀಪ್ 2 ವಿಕೆಟ್ ಪಡೆದರೂ ಬರೋಬ್ಬರಿ 84 ರನ್ ನೀಡಿ ದುಬಾರಿಯಾದರು. ವೇಗಿ ಶಾರ್ದೂಲ್ ಠಾಕೂರ್ 9 ಓವರ್ಗಳಲ್ಲಿ 80ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು. ಶಮಿ 1 ವಿಕೆಟ್ ಪಡೆದರು
ಆಕರ್ಷಕ ಶತಕ ಸಿಡಿಸಿದ ರಾಸ್ ಟೇಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.