ಕರ್ನಾಟಕ

karnataka

ETV Bharat / sports

ಕಿವೀಸ್ ಯೋಜನೆ ತಲೆಕೆಳಗಾಯಿತು: ಬುಮ್ರಾ ಬೆಸ್ಟ್​​​ ಡೆತ್ ಓವರ್​ ಬೌಲರ್ ಎಂದ ರಾಸ್ ಟೇಲರ್ - ಇಂಡೋ ಕಿವೀಸ್ ಫೈಟ್

ಭಾರತ ತಂಡದ ವೇಗಿ ಜಸ್ಪ್ರಿತ್ ಬುಮ್ರಾ ಬೆಸ್ಟ್​ ಡೆತ್​ ಓವರ್​​ ಬೌಲರ್​ ಎಂದು ಕಿವೀಸ್ ಆಟಗಾರ ರಾಸ್ ಟೇಲರ್​ ಹೇಳಿದ್ದಾರೆ.

Jasprit Bumrah the best death bowler,ಡೆತ್ ಓವರ್​ನ ಬೆಸ್ಟ್ ಬೌಲರ್
ರಾಸ್ ಟೇಲರ್

By

Published : Jan 25, 2020, 10:46 AM IST

ಆಕ್ಲೆಂಡ್:ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಬೆಸ್ಟ್ ಡೆತ್​ ಓವರ್ ಬೌಲರ್​ ಎಂದು ನ್ಯೂಜಿಲ್ಯಾಂಡ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಸ್ ಟೇಲರ್ ಹೇಳಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿದೆ. ತಮಗಿರುವ ಎಲ್ಲಾ ಅವಕಾಶಗಳನ್ನ ಬಳಸಿಕೊಂಡು 220 ರನ್ ಗಳಿಸಬೇಕೆಂದು ಕಿವೀಸ್​ ಸಜ್ಜಾಗಿತ್ತು. ಆದರೆ ಅಂತಿಮ ಓವರ್‌ಗಳಲ್ಲಿ ಕಿವೀಸ್ ತಂಡಕ್ಕೆ ರನ್ ಗಳಿಸಲು​ ಬುಮ್ರಾ ಅವಕಾಶ ನೀಡಲಿಲ್ಲ. 203 ರನ್​ಗಳಿಗೆ ಕಿವೀಸ್ ಆಟವನ್ನ ನಿಯಂತ್ರಿಸಲಾಯಿತು.

ಕಳೆದ ಹಲವು ದಿನಗಳಿಂದ ಬುಮ್ರಾ ಒಬ್ಬ ಕ್ಲಾಸ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅತ್ಯುತ್ತಮವಾಗಿ ದಾಳಿ ನಮಡೆಸಬಲ್ಲ ಶಕ್ತಿ ಬುಮ್ರಾಗಿದೆ. ಅವರ ಬೌಲಿಂಗ್​ನಿಂದ ನಾವು ಕಲಿಯುವುದು ಸಾಕಷ್ಟಿದ್ದು, ಆದಷ್ಟು ಶೀಘ್ರದಲ್ಲೇ ತಿಳಿದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದ ಟೇಲರ್ ಅರ್ಧಶತಕ ಸಿಡಿಸಿದ್ರು.

ಮೊದಲ ಟಿ-20 ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್ ಆಟಗಾರರು, 20 ಓವರ್​ಗಳಲ್ಲಿ 203 ರನ್​ ಗಳಿಸಿ ಭಾರತಕ್ಕೆ ಬೃಹತ್​ ಗುರಿ ನೀಡಿದ್ರು. ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬಿರುಸಿನ ಆಟದ ನೆರವಿನಿಂದ ಟೀಂ ಇಂಡಿಯಾ ಇನ್ನು ಒಂದು ಓವರ್ ಬಾಕಿ ಇರುವಂತೆ ಜಯ ಸಾಧಿಸಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ABOUT THE AUTHOR

...view details