ಕರ್ನಾಟಕ

karnataka

ETV Bharat / sports

ಮೋಯಿನ್ ಅಲಿಗೆ ಕ್ಷಮೆಯಾಚಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್​?

ಎರಡನೇ ಟೆಸ್ಟ್​ ಪಂದ್ಯದಲ್ಲಿ 8 ವಿಕೆಟ್ ಮತ್ತು 2ನೇ ಇನ್ನಿಂಗ್ಸ್​ ವೇಳೆ ಕೇವಲ 18 ಎಸೆತಗಳಲ್ಲಿ 43 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಆಗಿದ್ದ ಮೋಯಿನ್ ಅಲಿ ಹಿಂದೆ ತಂಡದ ನೈಜ ಯೋಜನೆಯಂತೆ 10 ದಿನಗಳ ಬ್ರೇಕ್​ ಪಡೆದು ಇಂಗ್ಲೆಂಡ್​ಗೆ ತೆರಳಿದ್ದರು.

ಮೋಯಿನ್ ಅಲಿಗೆ ಕ್ಷಮೆಯಾಚಿಸಿದ  ಜೋ ರೂಟ್
ಮೋಯಿನ್ ಅಲಿಗೆ ಕ್ಷಮೆಯಾಚಿಸಿದ ಜೋ ರೂಟ್

By

Published : Feb 17, 2021, 2:04 PM IST

ಲಂಡನ್​: ಎರಡನೇ ಟೆಸ್ಟ್​ ಮುಗಿಯುತ್ತಿದ್ದಂತೆ ಮೋಯಿನ್ ಅಲಿ ತವರಿಗೆ ಮರಳುವ ನಿರ್ಧಾರ ಅವರೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಕ್ಕೆ ಇಂಗ್ಲೆಂಡ್ ತಂಡದ ನಾಯಕ ಇಂಗ್ಲೆಂಡ್ ಆಲ್​ರೌಂಡರ್​ಗೆ ಕ್ಷಮೆ ಕೋರಿದ್ದಾರೆ.

ಎರಡನೇ ಟೆಸ್ಟ್ ನಂತರ ಆಲ್‌ರೌಂಡರ್ ಮೋಯಿನ್ ಅಲಿ ಮುಂದಿನ 2 ಟೆಸ್ಟ್​ಗಳಲ್ಲಿ ಆಡುವುದಿಲ್ಲ ಎಂದು ತಿಳಿಸಿದ್ದ ರೂಟ್​, ಈ ನಿರ್ಧಾರ ಅಲಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ಆದರೆ, ಅಲಿ ಇಂಗ್ಲೆಂಡ್​ಗೆ ತೆರಳುವುದು ಪೂರ್ವ ನಿರ್ಧಾರಿತ ತಂಡದ ಯೋಜನೆಯಾಗಿದ್ದು, ತಂಡದ ರೊಟೇಷನ್ ಪದ್ದತಿಯ ಭಾಗವಾಗಿ ಮೋಯಿನ್ ಸೀಮಿತ ಓವರ್​ಗಳ ಸರಣಿಗೂ ಮುನ್ನ ವಿಶ್ರಾಂತಿಗಾಗಿ ತವರಿಗೆ ಮರಳುತ್ತಿದ್ದರು.

ಎರಡನೇ ಟೆಸ್ಟ್​ ಪಂದ್ಯದಲ್ಲಿ 8 ವಿಕೆಟ್ ಮತ್ತು 2ನೇ ಇನ್ನಿಂಗ್ಸ್​ ವೇಳೆ ಕೇವಲ 18 ಎಸೆತಗಳಲ್ಲಿ 43 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಆಗಿದ್ದ ಮೋಯಿನ್ ಅಲಿ ಹಿಂದೆ ತಂಡದ ನೈಜ ಯೋಜನೆಯಂತೆ 10 ದಿನಗಳ ಬ್ರೇಕ್​ ಪಡೆದು ಇಂಗ್ಲೆಂಡ್​ಗೆ ತೆರಳಿದ್ದರು.

ಆದರೆ, ಇದರ ಅರಿವಿಲ್ಲದೇ ರೂಟ್​ ಬಯೋಬಬಲ್​ನಲ್ಲಿರುವ ಕಾರಣ ಆಟಗಾರರು ಯಾವಾಗ ತಂಡದಿಂದ ಹೊರಗುಳಿಯಲು ಬಯಸಿದರೆ ಅವರನ್ನು ಕಳುಹಿಸಿಕೊಡುವುದಕ್ಕೆ ತಂಡದಲ್ಲಿ ಒಪ್ಪಿಗೆ ಇದೆ ಎಂದು ಹೇಳಿದ್ದರು. ಆದರೆ, ಮೊಯೀನ್ ಅಲಿ ತವರಿಗೆ ಮರಳಿದ್ದು, ಪೂರ್ವ ನಿರ್ಧಾರಿತ ಯೋಜನೆಯಾದ ಕಾರಣ ಆಲ್​ರೌಂಡರ್​ಗೆ ಇಂಗ್ಲೆಂಡ್​ ನಾಯಕ ಕ್ಷಮೆ ಕೋರಿದ್ದಾರೆ ಎಂದು ಕೆಲವು ಬ್ರಿಟೀಷ್ ಸುದ್ದಿ ಪತ್ರಿಕೆಗಳು ಬುಧವಾರ ವರದಿ ಮಾಡಿವೆ.

ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಭಾರತ ತಂಡ 317 ರನ್​ಗಳ ಜಯ ಸಾಧಿಸಿತ್ತು. 3 ಮತ್ತು 4ನೇ ಟೆಸ್ಟ್​ ಪಂದ್ಯಗಳು ಅಹ್ಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದ್ದು, ಜಾನಿ ಬೈರ್ಸ್ಟೋವ್ ಮತ್ತು ಮಾರ್ಕ್​ವುಡ್​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದನ್ನು ಓದಿ: 3ನೇ ಟೆಸ್ಟ್​ ಪಂದ್ಯದಲ್ಲಿ ಓಪನರ್​ ಆಗಿ ಜಾನಿ ಬೈರ್ಸ್ಟೋವ್ ಕಣಕ್ಕಿಳಿಯಲಿ: ಸ್ಟೀವ್ ಹಾರ್ಮಿಸನ್

ABOUT THE AUTHOR

...view details