ಕರ್ನಾಟಕ

karnataka

ETV Bharat / sports

ಧೋನಿಯ ನಾಯಕತ್ವದ ಗುಣಗಳು ರೋಹಿತ್ ಶರ್ಮಾ ಹೊಂದಿದ್ದಾರೆ : ಸುರೇಶ್ ರೈನಾ - ರೋಹಿತ್ ಶರ್ಮಾ ಲೇಟೆಸ್ಟ್ ನ್ಯೂಸ್

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವವನ್ನು ಹೋಲುತ್ತದೆ ಎಂದು ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಪ್ರಶಂಸಿಸಿದ್ದಾರೆ.

Rohit's captaincy is very similar to MSD
ಧೋನಿಯಂತ ನಾಯಕತ್ವ ಗುಣವನ್ನು ರೋಹಿತ್ ಶರ್ಮಾ ಹೊಂದಿದ್ದಾರೆ

By

Published : May 22, 2020, 5:51 PM IST

ಹೈದರಾಬಾದ್: ಟೀಂ ಇಂಡಿಯಾ ಟಿ-20 ಉಪನಾಯಕ ರೋಹಿತ್ ಶರ್ಮಾ ಅವರ ನಾಯಕತ್ವ ಶೈಲಿಯು ನಾಯಕ ವಿರಾಟ್ ಕೊಹ್ಲಿ ಅವರ ಶೈಲಿಯಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಮತ್ತು ಇದನ್ನು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಶೈಲಿಗೆ ಹೋಲಿಸಲಾಗುತ್ತಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮಾತನಾಡಿದ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ, 'ರೋಹಿತ್ ಅವರ ನಾಯಕತ್ವವು ಧೋನಿ ಅವರ ನಾಯಕತ್ವದೊಂದಿಗೆ ಹೋಲುತ್ತದೆ. ಅವರು ಶಾಂತವಾಗಿ ಕೆಲಸ ಮಾಡುವ ರೀತಿ, ಆಟಗಾರರನ್ನು ಪ್ರೇರೇಪಿಸುವ ವೈಖರಿ. ಅವರು ಬಿಂದಾಸ್, ಅವರು ಬ್ಯಾಟಿಂಗ್ ಮಾಡಲು ಹೋದಾಗಲೆಲ್ಲಾ ರನ್ ಗಳಿಸುತ್ತೇನೆ ಎಂಬ ವಿಶ್ವಾಸ ಇರುತ್ತದೆ. ಆಟಗಾರನಲ್ಲಿ ಇಂತಹ ವಿಶ್ವಾಸವಿದ್ದರೇ ಉಳಿದ ಆಟಗಾರರು ಸಹ ಅವರಿಂದ ಸ್ಫೂರ್ತಿಗೊಳ್ಳುತ್ತಾರೆ. ರೋಹಿತ್ ಅವರ ಈ ಗುಣ ನನಗೆ ತುಂಬಾ ಇಷ್ಟ' ಎಂದು ರೈನಾ ಹೇಳಿದ್ದಾರೆ.

ಪುಣೆ ವಿರುದ್ಧದ ಫೈನಲ್‌ ಪಂದ್ಯವನ್ನು ಇತ್ತೀಚೆಗೆ ನೋಡಿದ್ದೇನೆ, ರೋಹಿತ್ ಮುಂಬೈನ ನಾಯಕನಾಗಿ ಸುಮಾರು ಎರಡರಿಂದ ಮೂರು ಉತ್ತಮ ನಿರ್ಧಾರ ತೆಗೆದುಕೊಂಡರು. ಕಠಿಣ ಪರಿಸ್ಥಿತಿಯಲ್ಲಿ ಬದಲಾವಣೆಗಳನ್ನು ಮಾಡಿದ ರೀತಿ, ಒತ್ತಡವನ್ನು ನಿಭಾಯಿಸಿಸುವ ಕಲೆಗಾರಿಕೆ ಉತ್ತಮವಾಗಿತ್ತು. ಈ ಎಲ್ಲಾ ನಿರ್ಧಾರಗಳನ್ನು ಅವರು ತಾವೇ ತೆಗೆದುಕೊಡರು. ಬೇರೆಯವರಿಂದ ಸಲಹೆ ಪಡೆದರೂ ಯಾವಾಗ ಏನು ಮಾಡಬೇಕೆಂದು ಅವರೇ ನಿರ್ಧರಿಸಬೇಕು ಎಂದಿದ್ದಾರೆ.

ABOUT THE AUTHOR

...view details