ನವದೆಹಲಿ:ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ತನ್ನ ಸ್ನೇಹಿತ ಹಾಗೂ ತಂಡದ ಸಹ ಆಟಗಾರ ಸುರೇಶ್ ರೈನಾರನ್ನು ಮತ್ತೆ ಟೀಮ್ ಇಂಡಿಯಾದಲ್ಲಿ ನೋಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಇನ್ಸ್ಟಾಗ್ರಾಂ ಲೈವ್ ಸೆಷನ್ನಲ್ಲಿ ಸುರೇಶ್ ರೈನಾ ಜೊತೆ ಮಾತನಾಡಿದ್ದ ರೋಹಿತ್, ರೈನಾರಂತಹ ಆಟಗಾರರು ತಂಡದಲ್ಲಿ ಇರಬೇಕು, ಧೋನಿ ಕಮ್ಬ್ಯಾಕ್ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ರೈನಾರಂತಹ ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್ ಮಾಡಬಲ್ಲ ಆಟಗಾರ ತಂಡಕ್ಕೆ ಅವಶ್ಯಕತೆ ಇದೆ ಎಂದು ನಾವು ಮಾತನಾಡಿಕೊಳ್ಳುತ್ತಿರುತ್ತೇವೆ. ಹಲವಾರು ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಆಡಿ, ತಂಡದಿಂದ ಹೊರಗುಳಿಯುವುದು ತುಂಬಾ ಕಷ್ಟ" ಎಂದು ರೋಹಿತ್ ಹೇಳಿದ್ದಾರೆ.
ಕಳೆದ 2 ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಕಷ್ಟಪಡುತ್ತಿರುವ ರೈನಾ ಮತ್ತೆ ತಂಡ ಸೇರಿಕೊಳ್ಳಲು ಶತಾಯಗತಾಯವಾಗಿ ಶ್ರಮಿಸುತ್ತಿದ್ದಾರೆ. ಮತ್ತೆ ತಂಡಕ್ಕೆ ಮರಳುವುದಾಗಿಯೂ ಹೇಳಿದ್ದಾರೆ.
ನಾನು ಗಾಯಗೊಂಡು ಶಸ್ತ್ರ ಚಿಕಿತ್ಸೆಗೊಳಗಾಗಿದ್ದೇ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು. ಆದರೆ ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಆದರೆ ಆಯ್ಕೆ ನನ್ನ ಕೈಯಲ್ಲಿಲ್ಲ. ಉತ್ತಮ ಪ್ರದರ್ಶನ ಮಾಡೋದಷ್ಟೆ ನನ್ನ ಗುರಿ. ನಾನು ಕ್ರಿಕೆಟ್ ಅನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ನಾವು ಕಿರಿಯರಾಗಿದ್ದಾಗ ನಮಗೆ ತಂಡದ ಹಿರಿಯ ಆಟಗಾರರ ಬೆಂಬಲ ನೀಡುತ್ತಿದ್ದರು, ಈಗಲೂ ನಾವು ಅದನ್ನ ಭಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಧೋನಿ ವಿಚಾರವಾಗಿ ಮಾತನಾಡಿದ ಅವರು, ‘ಧೋನಿ ಉತ್ತಮ ಬ್ಯಾಟಿಂಗ್, ಕೀಪಿಂಗ್ ಮಾಡಿದ್ದಾರೆ. ಅವರೂ ಕೂಡ ಭಾರತ ತಂಡಕ್ಕೆ ವಾಪಸ್ ಆಗಬೇಕು’ಎಂದು ತಿಳಿಸಿದ್ದಾರೆ.