ಮೆಲಬೋರ್ನ್: ಭಾರತ ಟೆಸ್ಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 99 ಸಿಕ್ಸರ್ ಸಿಡಿಸಿದ್ದು, 3ನೇ ಟೆಸ್ಟ್ನಲ್ಲಿ ಕೇವಲ ಒಂದು ಸಿಕ್ಸರ್ ಸಿಡಿಸಿದರೆ ಆಸೀಸ್ ವಿರುದ್ಧ 100 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ (423), ಕ್ರಿಸ್ ಗೇಲ್ (534) ಮತ್ತು ಶಾಹೀದ್ ಅಫ್ರಿದಿ (476) ಸಿಕ್ಸರ್ ಬಾರಿಸಿದ್ದಾರೆ.
ಇದೀಗ ರೋಹಿತ್ ಶರ್ಮಾ ಕೇವಲ ಒಂದು ಸಿಕ್ಸರ್ ಸಿಡಿಸಿದರೆ ಆಸ್ಟ್ರೇಲಿಯಾ ವಿರುದ್ಧ 100 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈಗಾಗಲೇ ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 76, ಟಿ20 ಕ್ರಿಕೆಟ್ನಲ್ಲಿ 15 ಹಾಗೂ ಟೆಸ್ಟ್ನಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ.