ದುಬೈ:ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಗೆ ಸಿಕ್ಕಿರುವ ಗೌರವದ ಬಗ್ಗೆ ಅಭಿಮಾನಿಗಳಿಗೆ ಹಿಟ್ಮ್ಯಾನ್ ಧನ್ಯವಾದ ಅರ್ಪಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಲು ಸದ್ಯ ದುಬೈನಲ್ಲಿರುವ ರೋಹಿತ್ ಶರ್ಮಾ ಅಲ್ಲಿಂದಲೇ ವಿಡಿಯೋ ಹರಿಬಿಟ್ಟಿದ್ದಾರೆ. ನಿಮ್ಮ ಶುಭಾಶಯ ಹಾಗೂ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ಇದು ಅದ್ಭುತ ಜರ್ನಿಯಾಗಿದೆ ಎಂದು ಟ್ವಿಟರ್ನಲ್ಲಿ ವಿಡಿಯೋ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿ ಇಂತಹ ಉನ್ನತ ಕ್ರೀಡಾ ಗೌರವ ಪಡೆದುಕೊಳ್ಳುವುದು ಒಂದು ದೊಡ್ಡ ಸವಾಲು. ಅದರ ಬಗ್ಗೆ ನನಗೆ ಸಂತೋಷವಿದೆ. ನಿಮ್ಮೆಲ್ಲರಿಗೂ ನಾನು ಋಣಿ. ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಯಾವಾಗಲೂ ನಿಮ್ಮ ಬೆಂಬಲ ಹೀಗೇ ಇರಲಿ ಎಂದಿರುವ ರೋಹಿತ್ ಶರ್ಮಾ, ದೇಶಕ್ಕಾಗಿ ಮತ್ತಷ್ಟು ಪ್ರಶಸ್ತಿ ತಂದುಕೊಡುವ ಭರವಸೆ ನೀಡಿದ್ದಾರೆ.