ರಾಂಚಿ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ದ್ವಿಶತಕ ಬಾರಿಸಿ ಕಮಾಲ್ ಮಾಡಿದ್ದಾರೆ.
ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ತ್ರಿಶತಕ ಸಿಡಿಸಿರುವ ದಾಖಲೆ ಹೊಂದಿರುವ ವೀರೇಂದ್ರ ಸೆಹ್ವಾಗ್ ಹುಟ್ಟುಹಬ್ಬವಾದ ಇಂದು ರೋಹಿತ್ ಶರ್ಮಾ ದ್ವಿಶತಕ ಬಾರಿಸಿ ವಿಶೇಷವಾಗಿ ಗಿಫ್ಟ್ ನೀಡಿದ್ದಾರೆ. ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ದಾಖಲೆಯ ದ್ವಿಶತಕ(264) ಇನ್ನೂ ಯಾರು ಸಹ ಮುರಿದಿಲ್ಲ.
249 ಎಸೆತದಲ್ಲಿ 205 ರನ್ ಬಾರಿಸಿರುವ ರೋಹಿತ್ ಇನ್ನಿಂಗ್ಸ್ನಲ್ಲಿ 5 ಸಿಕ್ಸರ್ ಹಾಗೂ 28 ಆಕರ್ಷಕ ಬೌಂಡರಿಗಳು ಸೇರಿವೆ. ಜೊತೆಗೆ ಶರ್ಮಾ ಪಾಲಿಗೆ ಇದು ಚೊಚ್ಚಲ ದ್ವಿಶತಕ ಸಂಭ್ರಮ. ಸಿಕ್ಸರ್ ಮೂಲಕ ಇನ್ನೂರರ ಗಡಿ ದಾಟಿದ್ದು, ಸೆಹ್ವಾಗ್ ಬರ್ತ್ಡೇ ದಿನವೇ ಬ್ಯಾಟಿಂಗ್ ವೈಭವ ಕಂಡುಬಂದಿದ್ದು ವಿಶೇಷವಾಗಿದೆ.