ರಾಂಚಿ:ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಆರಂಭಿಕ ಜೋಡಿ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರವಾಲ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಕಳೆದ 87 ವರ್ಷದ ಕ್ರಿಕೆಟ್ ಇತಿಹಾಸದಲ್ಲಿ ಮೂಡಿ ಬಂದಿರುವ ಮೊದಲ ರೆಕಾರ್ಡ್ ಇದಾಗಿದೆ.
ಫೈನಲ್ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ಕೇವಲ 10 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ. ಆದರೆ, ರೋಹಿತ್ ಶರ್ಮಾ ಮತ್ತೊಂದು ಶತಕ ಸಿಡಿಸಿದ್ದು, ಒಂದೇ ಟೆಸ್ಟ್ ಸರಣಿಯಲ್ಲಿ ಬರೋಬ್ಬರಿ ಮೂರು ಶತಕ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ಈ ಆರಂಭಿಕ ಜೋಡಿ ಒಟ್ಟು ಐದು ಶತಕ ಸಿಡಿಸಿದ್ದು, ಇಂತಹ ದಾಖಲೆ ಮೂಡಿ ಬಂದಿರುವುದು ಇದೇ ಮೊದಲ ಸಲ ಎಂಬುದು ಗಮನಾರ್ಹ ಸಂಗತಿ.