ಕರ್ನಾಟಕ

karnataka

ETV Bharat / sports

ಐಪಿಎಲ್ ಫೈನಲ್​ ನಂತರ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆ - ಐಪಿಎಲ್ 2020

ಅಗತ್ಯವಿದ್ದರೆ ರೋಹಿತ್​ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಟಿ20 ಸರಣಿ ವೇಳೆಗೆ ಹಿಟ್‌ಮ್ಯಾನ್‌ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ..

India tour of Australia
ರೋಹಿತ್ ಶರ್ಮಾ

By

Published : Nov 8, 2020, 5:49 PM IST

ದುಬೈ: ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ಮುಂಬೈ ತಂಡದಲ್ಲಿ ಆಡುತ್ತಿರುವುದರಿಂದ ನವೆಂಬರ್​ 11ರಂದು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ತಂಡದ ಜೊತೆ ಹಿಟ್​ಮ್ಯಾನ್​ರನ್ನು ಕಳುಹಿಸಲು ಬಿಸಿಸಿಐ ಆಲೋಚಿಸುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

2 ವಾರಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಮೂರು ಮಾದರಿಯ ಕ್ರಿಕೆಟ್​ಗೂ ಆಯ್ಕೆ ಸಮಿತಿ ತಂಡವನ್ನು ಘೋಷಿಸಿತ್ತು. ಆದರೆ, ರೋಹಿತ್ ಶರ್ಮಾರನ್ನು ತಂಡದಿಂದ ಕೈಬಿಟ್ಟಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಹಾಗೂ ಕ್ರಿಕೆಟ್​ ಪಂಡಿತರನ್ನ ಆಶ್ಚರ್ಯಕ್ಕೀಡು ಮಾಡಿತ್ತು.

ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಮುಂಬೈ ತಂಡವನ್ನು ರೋಹಿತ್ ಮುನ್ನಡೆಸಿದ್ದಾರೆ. ಫೀಲ್ಡಿಂಗ್​ನಲ್ಲೂ ಚಾಕಚಕ್ಯತೆ ಕಂಡು ಬರುತ್ತಿರುವುದರಿಂದ ಬಿಸಿಸಿಐ ರೋಹಿತ್​ರನ್ನು ಆಸೀಸ್ ಪ್ರವಾಸಕ್ಕೆ ಕಳುಹಿಸಲಿದೆ ಎನ್ನಲಾಗುತ್ತಿದೆ.

"ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವ ವಿಚಾರವಾಗಿ ಆದಷ್ಟು ಬೇಗ ನಿರ್ಧಾರ ಪ್ರಕಟವಾಗಲಿದೆ. ರೋಹಿತ್‌ ಭಾರತ ತಂಡದೊಂದಿಗೆ ಇರುವುದು ಮತ್ತು ಫಿಸಿಯೋ ನಿತಿನ್ ಪಟೇಲ್ ಮತ್ತು ಟ್ರೈನರ್​ ನಿಕ್ ವೆಬ್ ಜೊತೆ ಸ್ಟ್ರೆಂತ್ ಅಂಡ್​ ಕಂಡೀಷನಿಂಗ್ ವರ್ಕ್ ಮಾಡುವುದು ನ್ಯಾಯೋಚಿತವಾಗಿದೆ.

ಇಲ್ಲಿ ಏನು ನಡೆಯುತ್ತದೆ ಎಂದು ಕಾದು ನೋಡೋಣ" ಎಂದು ಬಿಸಿಸಿಐ ಮೂಲ ತಿಳಿಸಿದೆ. ಅಗತ್ಯವಿದ್ದರೆ ರೋಹಿತ್​ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಟಿ20 ಸರಣಿ ವೇಳೆಗೆ ಹಿಟ್‌ಮ್ಯಾನ್‌ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details