ಕರ್ನಾಟಕ

karnataka

ETV Bharat / sports

28ನೇ ಶತಕ, ಈ ವರ್ಷದಲ್ಲಿ 7ನೇ ಸೆಂಚುರಿ... ಹಿಟ್​​ಮ್ಯಾನ್​​ನಿಂದ ಮತ್ತೊಂದು ರೆಕಾರ್ಡ್​! - ಇಂಡಿಯಾ ವರ್ಸಸ್​ ವೆಸ್ಟ್​ ಇಂಡೀಸ್​

ಟೀಂ ಇಂಡಿಯಾದ ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಬ್ಯಾಟ್​​ನಿಂದ ಮತ್ತೊಂದ ಶತಕ ಮೂಡಿ ಬಂದಿದ್ದು, ಇದೇ ವರ್ಷದಲ್ಲಿ 7ನೇ ಸೆಂಚುರಿ ಸಿಡಿಸಿದ್ದಾರೆ.

Rohit Sharma
ರೋಹಿತ್​ ಶರ್ಮಾ

By

Published : Dec 18, 2019, 4:51 PM IST

Updated : Dec 18, 2019, 4:57 PM IST

ವಿಶಾಖಪಟ್ಟಣ: ಟೀಂ ಇಂಡಿಯಾದ ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಹಿಟ್​​ಮ್ಯಾನ್​​ ಬ್ಯಾಟ್​​​ನಿಂದ ಸಿಡಿದಿರುವ 7ನೇ ಶತಕ ಇದಾಗಿದೆ.

ರೋಹಿತ್​ ಶರ್ಮಾ ಶತಕ

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ ಹಾಗೂ ಕೆಎಲ್​ ರಾಹುಲ್​ ಜೋಡಿ ದ್ವಿಶತಕದಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿತ್ತು. ಈ ವೇಳೆ ರೋಹಿತ್​ ತಮ್ಮ ಏಕದಿನ ಕ್ರಿಕೆಟ್​ ವೃತ್ತಿ ಜೀವನದ 28ನೇ ಶತಕ ಸಿಡಿಸಿದ್ರೆ, ಕೆಎಲ್​ ತಮ್ಮ ಮೂರನೇ ಏಕದಿನ ಶತಕ ಸಿಡಿಸಿ ಮಿಂಚಿದರು. ಇನ್ನು ಇದೇ ವರ್ಷದಲ್ಲಿ ರೋಹಿತ್​ ಬ್ಯಾಟ್​​ನಿಂದ ಸಿಡಿದ ಏಳನೇ ಶತಕ ಇದಾಗಿದೆ.

ರೋಹಿತ್​ ಶರ್ಮಾ ಶತಕ

ಕ್ಯಾಲೇಂಡರ್​ ವರ್ಷದಲ್ಲಿ ಸಿಡಿದ ಅತಿ ಹೆಚ್ಚು ಶತಕ
9 ಶತಕ: ಸಚಿನ್​ ತೆಂಡೂಲ್ಕರ್​​​ 1998
7 ಶತಕ: ಸೌರವ್​ ಗಂಗೂಲಿ 2000
7 ಶತಕ: ಡೇವಿಡ್​ ವಾರ್ನರ್​​​​ 2016
7 ಶತಕ: ರೋಹಿತ್​ ಶರ್ಮಾ 2019
ಇನ್ನು ಈ ಸಲದ ವಿಶ್ವಕಪ್​​ನಲ್ಲೇ ಐದು ಶತಕ ದಾಖಲು ಮಾಡಿದ್ದ ಹಿಟ್​​ಮ್ಯಾನ್​​ ಮಹಾಟೂರ್ನಿಯಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿದ್ದ ಪ್ಲೇಯರ್​ ಎಂಬ ರೆಕಾರ್ಡ್​ ಸಹ ನಿರ್ಮಾಣ ಮಾಡಿದ್ದರು.ಈ ಶತಕದೊಂದಿಗೆ ಪ್ರಸಕ್ತ ವರ್ಷದ ಏಕದಿನ ಕ್ರಿಕೆಟ್​​ನಲ್ಲಿ ವಿರಾಟ್​​ ಕೊಹ್ಲಿ ಹಿಂದಿಕ್ಕಿ ಅತಿ ಹೆಚ್ಚು ರನ್​ಗಳಿಕೆ ಮಾಡಿರುವ ಪ್ಲೇಯರ್​ ಎಂಬ ಪಾತ್ರಕ್ಕೆ ಹಿಟ್​​ಮ್ಯಾನ್​​ ಪಾತ್ರರಾಗಿದ್ದಾರೆ. ಇಂದಿನ ಪಂದ್ಯದಲ್ಲಿ 159ರನ್​ಗಳಿಕೆ ಮಾಡಿ ರೋಹಿತ್​ ಶರ್ಮಾ ವಿಕೆಟ್​​ ಒಪ್ಪಿಸಿದ್ದಾರೆ.

Last Updated : Dec 18, 2019, 4:57 PM IST

ABOUT THE AUTHOR

...view details