ಕರ್ನಾಟಕ

karnataka

ETV Bharat / sports

ಆತ ಹೆಚ್ಚು ಶ್ರಮವಿಲ್ಲದೇ ಎದುರಾಳಿ ತಂಡದ ಆಟಗಾರರನ್ನು ನಡುಗಿಸಬಲ್ಲ: ಭಾರತೀಯನ ಬಗ್ಗೆ​ ಬಟ್ಲರ್​ ಗುಣಗಾನ - IPL 2020

"ಶ್ರಮಪಡದೆ ಆಡುವ ಉತ್ತಮ ಶೈಲಿಯನ್ನು ಹಲವಾರು ಭಾರತೀಯ ಆಟಗಾರರು ಹೊಂದಿದ್ದಾರೆ. ರೋಹಿತ್​ ಶರ್ಮಾ ಹಲವು ವರ್ಷಗಳಿಂಧ ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡುವ ಹಾಗೂ ಶ್ರಮಪಡದೇ ಎದುರಾಳಿ ಆಟಗಾರರನ್ನು ಮಣಿಸಬಲ್ಲರು ಎಂದು ಜೋಸ್​ ಬಟ್ಲರ್​ ತಿಳಿಸಿದ್ದಾರೆ.

ರೋಹಿತ್​ ಶರ್ಮಾ-ಜೋಸ್​ ಬಟ್ಲರ್​
ರೋಹಿತ್​ ಶರ್ಮಾ-ಜೋಸ್​ ಬಟ್ಲರ್​

By

Published : Apr 15, 2020, 3:09 PM IST

ಲಂಡನ್​: ಭಾರತ ತಂಡದ ಸ್ಟಾರ್​ ಆಟಗಾರ ರೋಹಿತ್​ ಶರ್ಮಾ ಎದುರಾಳಿ ತಂಡದ ಆಟಗಾರರನ್ನು ತುಂಬಾ ಸುಲಭವಾಗಿ ಶ್ರಮವಿಲ್ಲದೇ ಮಣಿಸಿ ಶತಕ ಸಿಡಿಸುತ್ತಾರೆ ಎಂದು ಇಂಗ್ಲೆಂಡ್​ನ ವಿಕೆಟ್​ ಕೀಪರ್​ ಜೋಸ್​ ಬಟ್ಲರ್​ ವಿವರಿಸಿದ್ದಾರೆ.

"ರೋಹಿತ್​ ಶರ್ಮಾ ನನ್ನ ಪ್ರಕಾರ ಒಬ್ಬ ಅದ್ಭುತ ಬ್ಯಾಟ್ಸ್​ಮನ್​ ", ಎಂದು ಬಟ್ಲರ್​ ರಾಜಸ್ಥಾನ ರಾಯಲ್ಸ್​ನ ಇನ್​​​ಸ್ಟಾಗ್ರಾಂ​ ಲೈವ್​ ವೇಳೆ ಹೇಳಿದ್ದಾರೆ.

"ಶ್ರಮಪಡದೆ ಆಡುವ ಉತ್ತಮ ಶೈಲಿಯನ್ನು ಹಲವಾರು ಭಾರತೀಯ ಆಟಗಾರರು ಹೊಂದಿದ್ದಾರೆ. ರೋಹಿತ್​ ಶರ್ಮಾ ಹಲವು ವರ್ಷಗಳಿಂಧ ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡುವ ಹಾಗೂ ಶ್ರಮಪಡದೇ ಎದುರಾಳಿ ಆಟಗಾರರನ್ನು ಮಣಿಸಬಲ್ಲರು ಎಂದು ತಿಳಿಸಿದ್ದಾರೆ.

ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನ ಶ್ರೇಷ್ಠ ಏಕದಿನ ಆಟಗಾರನಾಗಿದ್ದಾರೆ. ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 3 ಧ್ವಿಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರನಾಗಿದ್ದಾರೆ. 32 ವರ್ಷದ ರೋಹಿತ್​ ಶರ್ಮಾ 2019ರ ವಿಶ್ವಕಪ್​ನಲ್ಲಿ 5 ಶತಕದ ಸಹಿತ 648 ರನ್​ಗಳಿಸಿ ದಾಖಲೆ ಬರೆದಿದ್ದರು.

ರೋಹಿತ್​ ಅವರಲ್ಲಿ ನಾನು ನೋಡಿದ ಪ್ರಮುಖ ವಿಷಯವೆಂದರೆ ಅವರು ಕ್ರೀಸ್​ಗೆ ಆಗಮಿಸಿದರೆ ದೊಡ್ಡ ಮೊತ್ತ ಗಳಿಸುತ್ತಾರೆ. ಅದು ಇಡೀ ಪಂದ್ಯದ ಮೇಲೆ ಪರಿಣಾಮ ಬೀರುತ್ತಾದೆ. ವಿಶ್ವಕಪ್​ನಲ್ಲು 4-5 ಶತಕಗಳಿಸಿದ್ದರು ಎಂದು 2016-17 ರ ಐಪಿಎಲ್​ಗಳಲ್ಲಿ ರೋಹಿತ್ ಶರ್ಮಾರ ಟೀಮ್​ ಮೇಟ್​ ಆಗಿದ್ದ ಬಟ್ಲರ್​ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಕೆಲವು ಬೌಲರ್​ಗಳು ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಶಾರ್ಟ್​ ಬಾಲ್​ಗಳ ಮೂಲಕ ದಾಳಿ ನಡೆಸುತ್ತಿದ್ದರು. ಆದರೆ ಅಂತಹ ಬೌಲರ್​ಗಳನ್ನು ದಂಡಿಸಿ ಬೆಚ್ಚಿಸುತ್ತಿದ್ದಾರೆ ಎಂದು ರೋಹಿತ್​ ಶರ್ಮಾರನ್ನು ಮೆಚ್ಚಿಕೊಂಡಿದ್ದಾರೆ.

ABOUT THE AUTHOR

...view details