ಕ್ಯಾನ್ಬೆರಾ :ಬುಧವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
ಆದರೆ, ಈ ಸರಣಿಯಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್ಮನ್ ಶತಕಗಳಿಸುವಲ್ಲಿ ವಿಫಲರಾದರು. ಇದು ಈ ವರ್ಷದಲ್ಲಿ ಭಾರತದ ಕೊನೆಯ ಏಕದಿನ ಸರಣಿಯಾಗಿರುವುದರಿಂದ ಮಹತ್ವದ ದಾಖಲೆಯೊಂದು ಹಿಟ್ಮ್ಯಾನ್ ಹೆಸರಿನಲ್ಲಿ ಉಳಿದುಕೊಂಡಿದೆ.
ರೋಹಿತ್ ಶರ್ಮಾ ಈ ವರ್ಷ ಕೇವಲ 3 ಏಕದಿನ ಪಂದ್ಯವನ್ನು ಮಾತ್ರ ಆಡಿದ್ದಾರೆ. ಆದರೂ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಸಿಡಿಸಿದ್ದ 119 ರನ್ 2020ರಲ್ಲಿ ಭಾರತ ತಂಡದ ಬ್ಯಾಟ್ಸ್ಮನ್ಗಳು ದಾಖಲಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿ ಉಳಿದುಕೊಂಡಿದೆ.