ಕರ್ನಾಟಕ

karnataka

ETV Bharat / sports

ನಾನು ಮಾಡಿದ ತಪ್ಪನ್ನು ಯಾವುದೇ ಕಾರಣಕ್ಕೂ ರೋಹಿತ್​ ಶರ್ಮಾ ಮಾಡಬಾರದು: ಲಕ್ಷ್ಮಣ್​ ಹೀಗಂದಿದ್ದೇಕೆ? - ಹಿಟ್​ಮ್ಯಾನ್​

ವಿಂಡೀಸ್​ ವಿರುದ್ಧ ಆರಂಭಿಕನಾಗಿ ಕನ್ನಡಿಗ ಕೆಎಲ್​ ರಾಹುಲ್​ ವಿಫಲರಾದ ಹಿನ್ನಲೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಮಯಾಂಕ್​ ಜೊತೆಗೆ ರೋಹಿತ್​ ಶರ್ಮಾರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇನ್ನು ರಾಹುಲ್​ಗೆ ದೇಶಿ ಕ್ರಿಕೆಟ್​ನಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ಸಾಭೀತು ಪಡಿಸುವಂತೆ ಸಲಹೆ ಕೂಡ ನೀಡಿದ್ದಾರೆ.

Rohit Sharma

By

Published : Sep 28, 2019, 5:39 PM IST

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್​ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇದೇ ಸಂದರ್ಭದಲ್ಲಿ ರೋಹಿತ್​ರಂತೆಯೇ ಮಧ್ಯಮ ಕ್ರಮಾಂಕದಿಂದ ಕೆಲಕಾಲ ಆರಂಭಿಕರಾಗಿ ಬಡ್ತಿ ಪಡೆದಿದ್ದ ಭಾರತದ ಮಾಜಿ ಆಟಗಾರ ಲಕ್ಷ್ಮಣ್​ ಕೆಲವು ಸಲಹೆ ನೀಡಿದ್ದಾರೆ.

1996-98ರಲ್ಲಿ ಲಕ್ಷ್ಮಣ್​ ಕೂಡ ಆರಂಭಿಕ ಸ್ಥಾನಕ್ಕೆ ಒತ್ತಾಯಪೂರ್ವಕವಾಗಿ ಬ್ಯಾಟಿಂಗ್​ ಮಾಡಿಸಲಾಗಿತ್ತು. ಆದರೆ ಆ ವೇಳೆಗಾಗಲೆ ಅವರು ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದರು. ಆದರೆ ಕೆಲವು ಹಿರಿಯ ಆಟಗಾರರು ಹಾಗೂ ಕೋಚ್​ ಮಾತಿಗೆ ಬೆಲೆಕೊಟ್ಟು ಆರಂಭಿಕ ಸ್ಥಾನದಲ್ಲಿ ಆಡಿದ್ದರು. ಆದರೆ 3 ಅಥವಾ 4ನೇ ಕ್ರಮಾಂಕದಲ್ಲಿ ಯಶಸ್ಸಿನ ಅಲೆಯಲ್ಲಿದ್ದ ಅವರನ್ನು ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಸಿದ್ದರಿಂದ ತಮ್ಮ ತಂತ್ರಗಾರಿಕೆಯಲ್ಲಿ ಅನಿವಾರ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಆದರೆ ಅದು ನನ್ನ ಆಟಕ್ಕೆ ವಿರುದ್ಧವಾಗಿತ್ತು ಎಂದಿದ್ದಾರೆ.

ಆದರೆ ರೋಹಿತ್​ ಆ ತಪ್ಪನ್ನು ಮಾಡಬಾರದು. ನಾನು ಆರಂಭಿಕನಾಗಿ ಬಡ್ತಿ ಪಡೆದ ಸಂದರ್ಭದಲ್ಲಿ ಕೇವಲ 4 ಟೆಸ್ಟ್​ ಪಂದ್ಯಗಳನ್ನಾಡಿದ್ದೆ. ಆದರೆ ರೋಹಿತ್​ ಸುದೀರ್ಘ 12 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಳೆದಿದ್ದಾರೆ. ಅವರು ಇಲ್ಲಿಯವರೆಗೆ ಕಾಯ್ದುಕೊಂಡು ಬಂದಿರುವ ನೈಸರ್ಗಿಕ ಆಟವನ್ನು ಟೆಸ್ಟ್​ ಕ್ರಿಕೆಟ್​ ಆರಂಭಿಕನಾಗಿಯೂ ಮುಂದುವರಿಸಬೇಕು. ತಮ್ಮ ಬ್ಯಾಟಿಂಗ್​ ಕೌಶಲ್ಯ ಹಾಗೂ ತಂತ್ರಗಾರಿಕೆಯಲ್ಲಿ ಯಾವುದೇ ಬದಲಾವಣೆ ತರಬಾರದು ಎಂದು ವಿವಿಎಸ್​ ಸಲಹೆ ನೀಡಿದ್ದಾರೆ.

ಇನ್ನು ಆಯ್ಕೆ ಸಮಿತಿ ಹಿರಿಯ ಆಟಗಾರ ರೋಹಿತ್​ಗೆ ಸಂಪೂರ್ಣ 3 ಟೆಸ್ಟ್​ ಪಂದ್ಯಗಳಲ್ಲೂ ಆರಂಭಿಕನಾಗಿರುತ್ತಾರೆ ಎಂದು ಖಚಿತಪಡಿಸಿದ್ದಾರೆ. ರೋಹಿತ್​ ಮೇಲೆ ಹೊಸ ಜವಾಬ್ದಾರಿ ವಹಿಸಿ ಅವರ ಮೇಲೆ ತುಂಬಾ ನಂಬಿಕೆಯಿಟ್ಟಿದ್ದಾರೆ. ಉಪಖಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವುದು ತುಂಬಾ ಅನುಕೂಲವಾಗಿದ ಎಂದು ಲಕ್ಷ್ಮಣ್​ ರೋಹಿತ್​ ಟೆಸ್ಟ್​ ಕ್ರಿಕೆಟ್​ ಕುರಿತು ತಿಳಿಸಿದ್ದಾರೆ.

ವಿಂಡೀಸ್​ ವಿರುದ್ಧ ಆರಂಭಿಕನಾಗಿ ಕನ್ನಡಿಗ ಕೆಎಲ್​ ರಾಹುಲ್​ ವಿಫಲರಾದ ಹಿನ್ನಲೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಮಯಾಂಕ್​ ಜೊತೆಗೆ ರೋಹಿತ್​ ಶರ್ಮಾರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇನ್ನು ರಾಹುಲ್​ಗೆ ದೇಶಿ ಕ್ರಿಕೆಟ್​ನಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ಸಾಭೀತು ಪಡಿಸುವಂತೆ ಸಲಹೆ ಕೂಡ ನೀಡಿದ್ದಾರೆ.

ABOUT THE AUTHOR

...view details