ಕರ್ನಾಟಕ

karnataka

ETV Bharat / sports

ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್... ಧೋನಿ ದಾಖಲೆ ಸರಿಗಟ್ಟಿದ ಹಿಟ್​ಮ್ಯಾನ್​ - ರೋಹಿತ್​ ಶರ್ಮಾ

ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಭಾರತದ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನು ಧೋನಿ ಜೊತೆ ಹಂಚಿಕೊಂಡಿದ್ದಾರೆ.

Rohit Sharma

By

Published : Jun 27, 2019, 6:08 PM IST

ಮ್ಯಾಂಚೆಸ್ಟರ್: ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ವೆಸ್ಟ್​ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ವಿವಾದಾತ್ಮ ತೀರ್ಪಿಗೆ ಬಲಿಯಾಗುವ ಮುನ್ನ ಕೆಮರ್​ ರೋಚ್​ ಬೌಲಿಂಗ್​ನಲ್ಲಿ ಸಿಕ್ಸರ್​ ಸಿಡಿಸಿ ಆತಿ ಹೆಚ್ಚು ಸಿಕ್ಸರ್​ ಸಿಡಿಸಿದ ಭಾರತದ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನು ಧೋನಿ ಜೊತೆ ಹಂಚಿಕೊಂಡಿದ್ದಾರೆ.

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಮಾಜಿನಾಯಕ ಮಹೇಂದ್ರ ಸಿಂಗ್​ ಧೋನಿ 225 ರನ್​ ಸಿಕ್ಸರ್ ಸಿಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರು. ಇದೀಗ ರೋಹಿತ್​ ಶರ್ಮಾ ಕೂಡ 225 ಸಿಕ್ಸರ್​ ಸಿಡಿಸಿದ್ದು ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಧೋನಿ ಜೊತೆಗೆ ಹಂಚಿಕೊಂಡಿದ್ದಾರೆ.

ರೋಹಿತ್​ ಶರ್ಮಾ 210 ಏಕದಿನ ಪಂದ್ಯಗಳಲ್ಲೇ ರೋಹಿತ್ 225 ಸಿಕ್ಸರ್‌ ಸಿಡಿಸಿದ್ದರೆ, ಧೋನಿ 346 ಪಂದ್ಯಗಳಿಂದ 225 ಸಿಕ್ಸರ್​ ಸಿಡಿಸಿದ್ದಾರೆ. ಹೆಚ್ಚು ಸಿಕ್ಸರ್ ಸಿಡಿಸಿರುವ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ 351 ಸಿಕ್ಸರ್‌ ಸಿಡಿಸಿದ್ದಾರೆ. 324 ಸಿಕ್ಸರ್​ ಸಿಡಿಸಿರುವ ಯುನಿವರ್ಸಲ್​​​ ಬಾಸ್​ ಖ್ಯಾತಿಯ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details