ಬರ್ಮಿಂಗ್ಯಾಮ್:ವಿಶ್ವಕಪ್ನಲ್ಲಿ ಹಿಟ್ಮ್ಯಾನ್ ಅಬ್ಬರ ಮುಂದುವರೆದಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿದ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಈ ಶತಕದ ಮೂಲಕ ಟೀಂ ಇಂಡಿಯಾ ಉಪ ನಾಯಕ ರೋಹಿತ್ 2019 ವಿಶ್ವಕಪ್ ಟೂರ್ನಿಯಲ್ಲಿ ಮೂರು ಸೆಂಚುರಿ ಬಾರಿಸಿದ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ರೋಹಿತ್ ಇಂದು 102 ರನ್ ಗಳಿಸಿದ್ದು, ಈ ಮಹಾಸಮರದಲ್ಲಿ ಮೂರನೇ ಶತಕ ದಾಖಲಿಸಿದಂತಾಗಿದೆ. 109 ಎಸೆತಗಳಲ್ಲಿ ರೋಹಿತ್ ಶತಕದ ಗಡಿ ದಾಟಿದ್ದರು.
ಈ ಹಿಂದೆ ದ.ಆಫ್ರಿಕಾ ಹಾಗೂ ಪಾಕಿಸ್ತಾನ ವಿರುದ್ಧವೂ ಕೂಡ ಹಿಟ್ಮ್ಯಾನ್ ಶತಕದ ಸಾಧನೆಗೈದಿದ್ದರು. ಅಲ್ಲದೆ ಟೂರ್ನಿಯಲ್ಲಿ 440 ರನ್ ಪೇರಿಸಿರುವ ರೋಹಿತ್ ಅತಿಹೆಚ್ಚು ರನ್ ಗಳಿಸಿದವರಲ್ಲಿ 6ನೇ ಸ್ಥಾನದಲ್ಲಿದ್ದಾರೆ. 516 ರನ್ ಪೇರಿಸಿರುವ ಆಸಿಸ್ನ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ.
ಇನ್ನು ಒಂದೇ ವಿಶ್ವಕಪ್ ಟೂರ್ನಿಯಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಶತಕ ಗಳಿಸಿದ ವಿಶ್ವದ 5 ನೇ ಹಾಗೂ 2ನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿದರು.
ವಿಶ್ವಕಪ್ವೊಂದರಲ್ಲಿ ಹೆಚ್ಚು ಶತಕಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿ ಕುಮಾರ್ ಸಂಗಾಕ್ಕರ ಇದ್ದು, ಇವರು 2015ರ ವಿಶ್ವಕಪ್ನಲ್ಲಿ ಸತತ 4 ಶತಕ ಗಳಿಸಿದ್ದರು. ನಂತರದಲ್ಲಿ ಆಸ್ಟ್ರೇಲಿಯಾದ ಮಾರ್ಕ್ ವಾ 1993ರಲ್ಲಿ, ಭಾರತದ ಸೌರವ್ ಗಂಗೂಲಿ 2003ರಲ್ಲಿ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 2007ರಲ್ಲಿ ಹಾಗೂ ರೋಹಿತ್ ಶರ್ಮಾ ಪ್ರಸ್ತುತ ವಿಶ್ವಕಪ್ನಲ್ಲಿ 3 ಶತಕ ಸಿಡಿಸಿದ ದಾಖಲೆಗೆ ಬರೆದಿದ್ದಾರೆ.