ಬೆಂಗಳೂರು: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 4 ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್ನಲ್ಲಿ 9000 ಸಾವಿರ ರನ್ ಪೂರೈಸಿದ್ದಾರೆ.
32 ವರ್ಷದ ರೋಹಿತ್ ಶರ್ಮಾ ಭಾರತ ತಂಡದ ಪರ 224 ಪಂದ್ಯಗಳನ್ನಾಡಿದ್ದು, 217 ಇನ್ನಿಂಗ್ಸ್ನಲ್ಲಿ 9000 ರನ್ ಗಡಿ ದಾಟಿದ್ದಾರೆ. ಈ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ರೋಹಿತ್ಗೂ ಮುನ್ನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ 194 ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರೆ, ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ 205 ಇನ್ನಿಂಗ್ಸ್ಗಳಲ್ಲಿ 9 ಸಾವಿರದ ಮೈಲಿಗಲ್ಲು ತಲುಪಿದ್ದರು.
ಅಷ್ಟೇ ಅಲ್ಲದೆ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ 9000 ರನ್ ಗಡಿ ದಾಟಿದ ಭಾರತದ 7 ನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಸರಣಿ ನಿರ್ಣಾಯಕವಾಗಿರುವ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾ ತಂಡ ವಿಲಿಯರ್ಸ್ ಅವರ ಶತಕದ ನೆರವಿನಿಂದ 286 ರನ್ ಗಳಿಸಿದೆ.
ವೇಗವಾಗಿ 9000 ರನ್ಗಳಿಸಿದ ಬ್ಯಾಟ್ಸ್ಮನ್
- ವಿರಾಟ್ ಕೊಹ್ಲಿ (194 ಇನ್ನಿಂಗ್ಸ್)
- ಎಬಿ ಡಿ ವಿಲಿಯರ್ಸ್ (205 ಇನ್ನಿಂಗ್ಸ್)
- ರೋಹಿತ್ ಶರ್ಮಾ (217 ಇನ್ನಿಂಗ್ಸ್)*
- ಸೌರವ್ ಗಂಗೂಲಿ (228 ಇನ್ನಿಂಗ್ಸ್)
- ಸಚಿನ್ ತೆಂಡೂಲ್ಕರ್ (235 ಇನ್ನಿಂಗ್ಸ್)
- ಬ್ರಿಯಾನ್ ಲಾರ (239 ಇನ್ನಿಂಗ್ಸ್)
- ರಿಕಿ ಪಾಂಟಿಂಗ್ (242 ಇನ್ನಿಂಗ್ಸ್)
ಭಾರತದ ಪರ 9000ಕ್ಕಿಂತ ಹೆಚ್ಚು ರನ್ ಗಳಿಸಿದವರು
- ಸಚಿನ್ ತೆಂಡೂಲ್ಕರ್(18426)
- ವಿರಾಟ್ ಕೊಹ್ಲಿ (11703)
- ಸೌರವ್ ಗಂಗೂಲಿ(11221)
- ರಾಹುಲ್ ದ್ರಾವಿಡ್(10768)
- ಮಹೇಂದ್ರ ಸಿಂಗ್ ಧೋನಿ(10599)
- ಮೊಹಮ್ಮದ್ ಅಜರುದ್ದೀನ್(9378)
- ರೋಹಿತ್ ಶರ್ಮಾ (9000*)