ಮುಂಬೈ: ಕಳೆದ ಎಂಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಮುಂದಿನ ಪಂದ್ಯಕ್ಕೆ ಲಭ್ಯವಿರುವುದಾಗಿ ಜಹೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯಕ್ಕಾಗಿ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ರೋಹಿತ್ ಗಾಯಗೊಂಡಿದ್ದರು. ಹೀಗಾಗಿ ಹಿಂದಿನ ಪಂಜಾಬ್ ತಂಡದ ವಿರುದ್ಧದ ಪಂದ್ಯದಿಂದ ರೋಹಿತ್ ಶರ್ಮಾ ಹೊರಗುಳಿದಿದ್ದರು. ಈ ವೇಳೆ ತಂಡವನ್ನ ವೆಸ್ಟ್ ಇಂಡೀಸ್ನ ಕಿರನ್ ಪೊಲಾರ್ಡ್ ಮುಂದುವರೆಸಿದ್ದರು.
ಇದೀಗ ಅವರ ಗಾಯದ ಬಗ್ಗೆ ಮಾತನಾಡಿರುವ ಜಹೀರ್ ಖಾನ್, ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದು, ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಈಗಾಗಲೇ ನೆಟ್ನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂದಿನ ಪಂದ್ಯವನ್ನಾಡಲಿದೆ.
ಇನ್ನು ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ ವಿಶ್ವಕಪ್ಗಾಗಿ ಅವರು ಆಯ್ಕೆಯಾಗುವರೇ ಎಂಬ ಗೊಂದಲ ಸಹ ಶುರುವಾಗಿತ್ತು. ಇದೀಗ ಅವರು ಫಿಟ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದಂತಾಗಿದೆ.