ಕರ್ನಾಟಕ

karnataka

ETV Bharat / sports

ಇದು ಶ್ರೀಶಾಂತ್ ಘೋಷಿಸಿರುವ ಟೀಂ ಇಂಡಿಯಾ ತಂಡ: ಏಕದಿನಕ್ಕೆ ಕೊಹ್ಲಿ, ಟಿ20ಗೆ ರೋಹಿತ್ ಕ್ಯಾಪ್ಟನ್​ - ವಿರಾಟ್​ ಕೊಹ್ಲಿಗೆ ಏಕದಿನ ನಾಯಕತ್ವ

2007 ಟಿ20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕ್​ ಗೆದ್ದ ಭಾರತ ತಂಡದ ಆಟಗಾರನಾಗಿರುವ ಶ್ರೀಶಾಂತ್​ 2013ರ ಐಪಿಎಲ್​ನಲ್ಲಿ ಸ್ಪಾಟ್ ​ಫಿಕ್ಸಿಂಗ್​ನಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ 7 ವರ್ಷ ನಿಷೇಧಕ್ಕೊಳಗಾಗಿದ್ದರು. ಇದೀಗ ಸೆಪ್ಟೆಂಬರ್​ 13 ಕ್ಕೆ ಅವರ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, ಮತ್ತೆ ಕ್ರಿಕೆಟ್​ಗೆ ಮರಳುವ ಹಂಬಲದಲ್ಲಿದ್ದಾರೆ.

ಎಸ್ ಶ್ರೀಶಾಂತ್​
ಎಸ್ ಶ್ರೀಶಾಂತ್​

By

Published : Jul 7, 2020, 5:09 PM IST

ಮುಂಬೈ: ಭಾರತ ತಂಡದ ವೇಗಿ ಶ್ರೀಶಾಂತ್​ ತಮ್ಮ ನೆಚ್ಚಿನ ಟೀಂ​ ಇಂಡಿಯಾ ಇಲೆವೆನ್ ತಂಡವನ್ನು​ ಘೋಷಣೆ ಮಾಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಟಿ20 ನಾಯಕನನ್ನಾಗಿಯೂ, ಕೊಹ್ಲಿಯನ್ನು ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕನನ್ನಾಗಿ ಅವರು ಆಯ್ಕೆ ಮಾಡಿದ್ದಾರೆ.

2007 ಟಿ20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕ್​ ಗೆದ್ದ ಭಾರತ ತಂಡದ ಆಟಗಾರನಾಗಿರುವ ಶ್ರೀಶಾಂತ್​ 2013ರ ಐಪಿಎಲ್​ನಲ್ಲಿ ಸ್ಪಾಟ್ ​ಫಿಕ್ಸಿಂಗ್​ನಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ 7 ವರ್ಷ ನಿಷೇಧಕ್ಕೊಳಗಾಗಿದ್ದರು. ಇದೀಗ ಸೆಪ್ಟೆಂಬರ್​ 13 ಕ್ಕೆ ಅವರ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, ಮತ್ತೆ ಕ್ರಿಕೆಟ್​ಗೆ ಮರಳುವ ಹಂಬಲದಲ್ಲಿದ್ದಾರೆ. ಈಗಾಗಲೇ ರಣಜಿ ತಂಡದಲ್ಲಿ ಅವಕಾಶ ಪಡೆದಿರುವ ಅವರು ಐಪಿಎಲ್​ನಲ್ಲೂ ಆಡಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀಶಾಂತ್​ ಆಯ್ಕೆ ಮಾಡಿದ ಭಾರತ ತಂಡ:

ರೋಹಿತ್​ ಶರ್ಮಾ (ಟಿ20 ನಾಯಕ), ಶಿಖರ್​ ಧವನ್​, ವಿರಾಟ್​ ಕೊಹ್ಲಿ (ಏಕದಿನ ಹಾಗೂ ಟೆಸ್ಟ್​ ನಾಯಕ), ಸುರೇಶ್​ ರೈನಾ, ಕೆ.ಎಲ್.​ ರಾಹುಲ್​, ಎಂ.ಎಸ್.ಧೋನಿ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್​, ಜಸ್ಪ್ರೀತ್​ ಬುಮ್ರಾ ಹಾಗು ಎಸ್. ಶ್ರೀಶಾಂತ್​

ABOUT THE AUTHOR

...view details