ಕರ್ನಾಟಕ

karnataka

ETV Bharat / sports

ರೋಹಿತ್ ಶರ್ಮಾ, ಪೊಲಾರ್ಡ್​ ಮಿಂಚು: 191 ರನ್​ಗಳ ಬೃಹತ್ ಮೊತ್ತ ಕಲೆಹಾಕಿದ ಮುಂಬೈ ಇಂಡಿಯನ್ಸ್​ - ಮುಂಬೈ ಇಂಡಿಯನ್ಸ್​ ಹಾಗೂ ಕಿಂಗ್ಸ್​ ಇಲೆವೆನ್ ಪಂಜಾಬ್ ಲೈವ್ ಸ್ಕೋರ್​

ರೋಹಿತ್​ ಶರ್ಮಾ ಅರ್ಧಶತಕ, ಕೀರನ್ ಪೊಲಾರ್ಡ್​ ಮತ್ತು ಹಾರ್ದಿಕ್​ ಪಾಂಡ್ಯ ಕೊನೆಯ ಓವರ್​ಗಳಲ್ಲಿ ನಡೆಸಿದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​, ಕಿಂಗ್ಸ್ ಇಲೆವೆನ್​ ಪಂಜಾಬ್ ತಂಡಕ್ಕೆ 192 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

191 ರನ್​ಗಳ ಬೃಹತ್ ಮೊತ್ತ ಕಲೆಯಾಕಿದ ಮುಂಬೈ ಇಂಡಿಯನ್ಸ್​
191 ರನ್​ಗಳ ಬೃಹತ್ ಮೊತ್ತ ಕಲೆಯಾಕಿದ ಮುಂಬೈ ಇಂಡಿಯನ್ಸ್​

By

Published : Oct 1, 2020, 9:30 PM IST

Updated : Oct 1, 2020, 10:16 PM IST

ಅಬುಧಾಬಿ:ರೋಹಿತ್​ ಶರ್ಮಾ ಅರ್ಧಶತಕ, ಕೀರನ್ ಪೊಲಾರ್ಡ್​ ಮತ್ತು ಹಾರ್ದಿಕ್​ ಪಾಂಡ್ಯ ಕೊನೆಯ ಓವರ್​ಗಳಲ್ಲಿ ನಡೆಸಿದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​, ಕಿಂಗ್ಸ್ ಇಲೆವೆನ್​ ಪಂಜಾಬ್ ತಂಡಕ್ಕೆ 192 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

ಟಾಸ್​ ಗೆದ್ದ ಪಂಜಾಬ್ ತಂಡದ ನಾಯಕ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಮುಂಬೈಗೆ ಬ್ಯಾಟಿಂಗ್ ಅಹ್ವಾನಿಸಿದರು. ನಾಯಕನ ನಿರ್ಧಾರವನ್ನು ಮೊದಲ ಓವರ್​ನಲ್ಲಿ ಡಿಕಾಕ್(0)​ ವಿಕೆಟ್​ ಪಡೆಯುವ ಮೂಲಕ ಕಾಟ್ರೆಲ್ ಸಮರ್ಥಿಸಿಕೊಂಡರು.

ನಂತರ ಬಂದ ಬಂದ ಸೂರ್ಯ ಕುಮಾರ ಯಾದವ್​ ಕೇವಲ 10ಮ ರನ್​ಗಳಿಸಿ ಔಟಾದರು. ಈ ಸಂದರ್ಭದಲ್ಲಿ ನಾಯಕನ ಜೊತೆಗೂಡಿದ ಇಶಾನ್ ಕಿಶನ್​(28) 3ನೇ ವಿಕೆಟ್​ಗೆ 61 ರನ್​ಗಳ ಜೊತೆಯಾಟ ನೀಡಿದರು. ಕಿಶನ್​ ಇಂದು ಬ್ಯಾಟಿಂಗ್​ನಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ತೋರಲು ವಿಫಲರಾದರು. ಅವರು 32 ಎಸೆತಗಳಲ್ಲಿ 28 ರನ್​ಗಳಿಸಿ ಗೌತಮ್​ಗೆ ವಿಕೆಟ್​ ನೀಡಿದರು.

ನಂತರ ಪೊಲಾರ್ಡ್​ ಜೊತೆ ಸೇರಿಕೊಂಡ ರೋಹಿತ್ ನಿಧಾನವಾಗಿ ರನ್​ಗತಿ ಹೆಚ್ಚಿಸಿದರು. ಈ ಜೋಡಿ 43 ರನ್​ಗಳ ಜೊತೆಯಾಟ ನಡೆಸಿತು. ಈ ಸಂದರ್ಭದಲ್ಲಿ ಅರ್ಧಶತಕ ಸಿಡಿಸಿದ್ದ ರೋಹಿತ್​ ಶಮಿ ಬೌಲಿಂಗ್​ನಲ್ಲಿ ಮ್ಯಾಕ್ಸ್​ವೆಲ್ ಹಾಗೂ ನಿಶಾಮ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಅವರು 45 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್​ ಸೇರಿದಂತೆ 70 ರನ್​ಗಳಿಸಿ ಔಟಾದರು.

ಪೊಲಾರ್ಡ್​-ಹಾರ್ದಿಕ್ ಜುಗಲ್​ಬಂದಿ

ರೋಹಿತ್ ನಂತರ ಬಂದ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್​ ಜೊತೆಯಾಟದಲ್ಲಿ 23 ಎಸೆತಗಳಲ್ಲಿ 67 ರನ್​ ಸೇರಿಸಿದರು. 11 ಎಸೆತಗಳನ್ನೆದುರಿಸಿದ ಹಾರ್ದಿಕ್ 2 ಸಿಕ್ಸರ್​ ಹಾಗೂ 3 ಬೌಂಡರಿ ಸಹಿತ 30 ರನ್​ಗಳಿಸಿದರೆ, ಪೊಲಾರ್ಡ್​ 20 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 3 ಬೌಂಡರಿ ಸೇರಿದಂತೆ 47 ರನ್​ಗಳಿಸಿ ಔಟಾಗದೆ ಉಳಿದರು.

124ಕ್ಕೆ 4 ವಿಕೆಟ್​ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಬೀತಿಯಿದ್ದ ಮುಂಬೈ ತಂಡವನ್ನು 191 ರನ್​ಗಳ ಬೃಹತ್ ಮೊತ್ತ ದಾಖಲಿಸುವಂತೆ ಮಾಡಿದರು. ಮೊದಲಾರ್ಧದಲ್ಲಿ ಉತ್ತಮ ಬೌಲಿಂಗ್​ ನಿರ್ವಹಣೆ ಮಾಡಿದ್ದ ರಾಹುಲ್ ಕೊನೆಯ ಓವರ್​ನಲ್ಲಿ ಸ್ಪಿನ್ನರ್​ ಕಣಕ್ಕಿಳಿಸಿ ತಪ್ಪು ಮಾಡಿದರು. ಇದರ ಲಾಭ ಪಡೆದ ಪೊಲಾರ್ಡ್- ಹಾರ್ದಿಕ್​ 25 ರನ್​ ಚಚ್ಚಿದರು. ಅಲ್ಲದೆ ವೇಗಿ ಶಮಿ ಹಾಗೂ ನಿಶಾಮ್​ ಕೂಡ ತಮ್ಮ ಕೊನೆಯ ಓವರ್​ಗಳಲ್ಲಿ ದುಬಾರಿಯಾದ್ದದ್ದು ಪಂಜಾಬ್ ತಂಡಕ್ಕೆ ಹೊಡೆದ ನೀಡಿತು.

Last Updated : Oct 1, 2020, 10:16 PM IST

ABOUT THE AUTHOR

...view details