ನವದೆಹಲಿ:ಮಾಜಿ ನಾಯಕ ಎಂ ಎಸ್ ಧೋನಿ ಅವರ ನಾಯಕತ್ವದ ಗುಣ ಹಾಗೂ ಡ್ರೆಸ್ಸಿಂಗ್ ರೂಂನ ಮೇಲೆ ಅವರು ಬೀರಿದ ಪರಿಣಾಮದಿಂದಾಗಿ, ರೋಹಿತ್ ಶರ್ಮಾ ಕೂಡಾ ಧೋನಿಯನ್ನು ಫಾಲೋ ಮಾಡುವಂತೆ ಭಾರತ ತಂಡದ ಆಲ್‌ರೌಂಡರ್ ಸುರೇಶ್ ರೈನಾ ಹೇಳಿದ್ದಾರೆ.
ಸದ್ಯ ಸೀಮಿತ ಓವರ್ಗಳ ಕ್ರಿಕೆಟ್ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ, ನಾಯಕನಾಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಮೂಲಕ ನಾಲ್ಕು ಬಾರಿ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಹಂತಕ್ಕೆ ಕರೆದೊಯ್ದಿದ್ದಾರೆ. ಐಪಿಎಲ್ನಲ್ಲಿ ಮುಂಬೈ ತಂಡವನ್ನು ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡಿದ್ದಾರೆ. ರೋಹಿತ್ಗೆ 2018 ರ ಏಷ್ಯಾಕಪ್ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದ ಅನುಭವವೂ ಇದೆ ಎಂದು ರೈನಾ ಕೊಂಡಾಡಿದ್ದಾರೆ.