ಕರ್ನಾಟಕ

karnataka

ETV Bharat / sports

ತಂದೆಯ ಅನಾರೋಗ್ಯದ ಕಾರಣ ರೋಹಿತ್ ಆಸ್ಟ್ರೇಲಿಯಾಕ್ಕೆ ಹೋಗಲಿಲ್ಲ: ಬಿಸಿಸಿಐ ಸ್ಪಷ್ಟನೆ - ರೋಹಿತ್ ಭಾರತಕ್ಕೆ ಬಂದ ಕಾರಣ

ಐಪಿಎಲ್ ಮುಕ್ತಾಯದ ಬಳಿಕ ಆಸ್ಟ್ರೇಲಿಯಾಕ್ಕೆ ಬಾರದೆ ರೋಹಿತ್ ಶರ್ಮಾ ಭಾರತಕ್ಕೆ ಪ್ರಯಾಣ ಬೆಳೆಸಿದ್ದು ಏಕೆ ಎಂಬ ಪ್ರಶ್ನೆಗೆ ಬಿಸಿಸಿಐ ಉತ್ತರಿಸಿದೆ.

Rohit Sharma
ರೋಹಿತ್ ಶರ್ಮಾ

By

Published : Nov 27, 2020, 3:30 PM IST

ಸಿಡ್ನಿ(ಆಸ್ಟ್ರೇಲಿಯಾ): ರೋಹಿತ್​​ ಶರ್ಮಾ ಆಸ್ಟ್ರೇಲಿಯಾಕ್ಕೆ ಏಕೆ ಆಗಮಿಸಲಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿಸಿಸಿಐ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ 13ನೇ ಆವೃತ್ತಿ ಮುಕ್ತಾಯದ ಬಳಿಕ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟೀಂ ಇಂಡಿಯಾ ಜೊತೆಗೆ ಆಸ್ಟ್ರೇಲಿಯಾ ತೆರಳದೆ, ಭಾರತಕ್ಕೆ ವಾಪಸಾಗಿದ್ದರು.

ರೋಹಿತ್ ಶರ್ಮಾ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಅವರು ಆಸ್ಟ್ರೇಲಿಯಾಕ್ಕೆ ತೆರಳದೆ ಮುಂಬೈಗೆ ಬಂದಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ತಮ್ಮ ತಂದೆಯ ಅನಾರೋಗ್ಯದ ಕಾರಣ ರೋಹಿತ್ ಐಪಿಎಲ್ ನಂತರ ಮತ್ತೆ ಮುಂಬೈಗೆ ಬರಬೇಕಾಯಿತು. ಅವರ ತಂದೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಎನ್‌ಸಿಎಗೆ ಪ್ರಯಾಣಿಸಲು ಅವಕಾಶವಾಯಿತು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details