ಚೆನ್ನೈ : ಶುಕ್ರವಾರ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಒಂಟಿ ಕೊಂಬಿನ ಘೇಂಡಾಮೃಗದ ಚಿತ್ರವಿರುವ ಶೂಗಳನ್ನು ಧರಿಸುವ ಮೂಲಕ ರೋಹಿತ್ ಶರ್ಮಾ ಘೇಂಡಾಮೃಗಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಈ ಐಪಿಎಲ್ ರೋಹಿತ್ ಅವರು ಗ್ರೇಟ್ ಒನ್ - ಹಾರ್ನ್ಡ್ ಘೇಂಡಾಮೃಗ ಅಥವಾ ಭಾರತೀಯ ಘೇಂಡಾಮೃಗ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ವಿಧಾನವನ್ನು ಅನುಸರಿಸಿದ್ದು, ವನ್ಯಜೀವಿ ಪ್ರಿಯರಿಗೆ ಸಂತೋಷ ತಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಘೇಂಡಾಮೃಗ ಕಾಪಾಡಿ ಎನ್ನುವ ಸಂದೇಶ ಸಾರುವ ಶೂಗಳನ್ನು ಧರಿಸಿ ಮೈದಾನಕ್ಕಿಳಿದಿದ್ದರು. ರೋಹಿತ್ ಶರ್ಮಾ ರೈನೋ ಉಳಿಸುವಿಕೆಯ ಯೋಜನೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅವರು, ಬೇಟೆಯ ಮೂಲಕ, ವಾಸ ಸ್ಥಳದ ಅಭಾವದಿಂದ ಮತ್ತು ವಿವಿಧ ರೋಗದಿಂದ ರೈನೋಸ್ ಸಾಮೂಹಿಕ ಮರಣ ಅನುಭವಿಸುತ್ತಿರುವ ಒಂಟಿ ಕೊಂಬಿನ ಭಾರತ ರೈನೋ ತಳಿಯನ್ನು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.