ಕರ್ನಾಟಕ

karnataka

ETV Bharat / sports

2021ರ ಆಸ್ಟ್ರೇಲಿಯನ್ ಓಪನ್​ನಿಂದ ಹಿಂದೆ ಸರಿದ ರೋಜರ್​ ಫೆಡರರ್​ - ಆಸ್ಟ್ರೇಲಿಯಾ ಓಪನ್​ನಿಂದ ಹೊರಬಂದ ರೋಜರ್ ಫೆಡರರ್​

6 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್​ ಆಗಿರುವ ಫೆಡರರ್​ ಕಳೆದ ವರ್ಷ ಮಂಡಿ ನೋವಿನಿಂದ ಎರಡು ಅಪರೇಷನ್​ಗೆ ಒಳಗಾಗಿದ್ದಾರೆ. ಹಾಗಾಗಿ ವೃತ್ತಿಪರ ಟೆನ್ನಿಸ್​ಗೆ ತಯಾರಾಗಲು ಆಸ್ಟ್ರೇಲಿಯಾ ಓಪನ್​ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಮ್ಯಾನೇಜ್​ಮೆಂಟ್​ ಕಂಪನಿಯ ಸಿಇಒ ಟೋನಿ ಗಾಡ್ಸಿಕ್​ ​ಮಾಧ್ಯಮಕ್ಕೆ ತಿಳಿಸಿದ್ದಾರೆ.

2021ರ ಆಸ್ಟ್ರೇಲಿಯನ್ ಓಪನ್​
ರೋಜರ್​ ಫೆಡರರ್​

By

Published : Dec 28, 2020, 6:57 PM IST

ಮೆಲ್ಬೋರ್ನ್:ವಿಶ್ವದ ಶ್ರೇಷ್ಠ ಟೆನ್ನಿಸ್​ ತಾರೆಗಳಲ್ಲಿ ಒಬ್ಬರಾದ ಸ್ವಿಟ್ಜರ್​ಲೆಂಡಿನ​ ರೋಜರ್ ಫೆಡರರ್ 2021ರ ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

6 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್​ ಆಗಿರುವ ಫೆಡರರ್​ ಕಳೆದ ವರ್ಷ ಮಂಡಿ ನೋವಿನಿಂದ ಎರಡು ಅಪರೇಷನ್​ಗೆ ಒಳಗಾಗಿದ್ದಾರೆ. ಹಾಗಾಗಿ ವೃತ್ತಿಪರ ಟೆನ್ನಿಸ್​ಗೆ ತಯಾರಾಗಲು ಆಸ್ಟ್ರೇಲಿಯಾ ಓಪನ್​ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಮ್ಯಾನೇಜ್​ಮೆಂಟ್​ ಕಂಪನಿಯ ಸಿಇಒ ಟೋನಿ ಗಾಡ್ಸಿಕ್​ ​ಮಾಧ್ಯಮಕ್ಕೆ ತಿಳಿಸಿದ್ದಾರೆ.

2021ರ ಕ್ಯಾಲೆಂಡರ್​ಗೆ ಬಲಿಷ್ಠರಾಗಿ ಮರಳಲು ಚಿಂತಿಸಿರುವ ಫೆಡರರ್​, ಆಸ್ಟ್ರೇಲಿಯನ್ ಓಪನ್​ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಅವರು ಕಳೆದ ಒಂದೆರಡು ತಿಂಗಳುಗಳಿಂದ ಮೊಣಕಾಲು ಮತ್ತು ಫಿಟ್​ನೆಸ್​ ಮೇಲೆ ಸಾಕಷ್ಟು ಗಮನ ಹರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ರಹಾನೆ ಶತಕ ಭಾರತೀಯ ಕ್ರಿಕೆಟ್​ ಚರಿತ್ರೆಯ ಶ್ರೇಷ್ಠ ಸೆಂಚುರಿಗಳಲ್ಲಿ ಒಂದಾಗಲಿದೆ

ತಮ್ಮ ತಂಡದೊಂದಿಗೆ ಸಮಾಲೋಚಿಸಿದ್ದು, ಆಸ್ಟ್ರೇಲಿಯಾ ಓಪನ್ ನಂತರ ಸ್ಪರ್ಧಾತ್ಮಕ ಟೆನ್ನಿಸ್‌ಗೆ ಮರಳುವುದು ಉತ್ತಮ ನಿರ್ಧಾರ ಎಂದು ಅವರು ನಿರ್ಧರಿಸಿದ್ದಾರೆ" ಎಂದು ಗಾಡ್ಸಿಕ್ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

39 ವರ್ಷದ ಫೆಡರರ್ 2020ರ ವರ್ಷದ ಫೆಬ್ರವರಿಯಿಂದಲೇ ಟೆನ್ನಿಸ್​​ ಕೋರ್ಟ್‌ನಿಂದ ದೂರ ಉಳಿದಿದ್ದರು. ಆದಾಗ್ಯೂ ಇತ್ತೀಚೆಗೆ ತಮ್ಮ ತರಬೇತಿಯನ್ನು ಪ್ರಾರಂಭಿಸಿದ ಫೆಡರರ್, ಆಸ್ಟ್ರೇಲಿಯನ್ ಓಪನ್​ಗಾಗಿ ದುಬೈನಲ್ಲಿ ಸಿದ್ಧತೆ ಪ್ರಾರಂಭಿಸಿದ್ದರು. ಫೆ. 8ರಂದು ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯನ್ ಓಪನ್ ಎಂಟ್ರಿ ಪಟ್ಟಿಯಲ್ಲೂ ಸಹ ಅವರ ಹೆಸರನ್ನು ಪಟ್ಟಿ ಮಾಡಲಾಗಿತ್ತು. ಆದರೆ ಈಗ ಫೆಡರರ್ ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ.​

ABOUT THE AUTHOR

...view details