ದುಬೈ :ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಐಸಿಸಿಯ ಚೊಚ್ಚಲ 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನೀಡಿದ ಪ್ರದರ್ಶನ ನೋಡಿ ಈ ಪ್ರಶಸ್ತಿಗೆ ಶಿಪಾರಸು ಮಾಡಲಾಗಿತ್ತು.
ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಪಂತ್ 97 ಮತ್ತು ಬ್ರಿಸ್ಬೇನ್ ಗಬ್ಬಾದಲ್ಲಿ ಅಜೇಯ 89 ರನ್ಗಳಿಸಿ ಐತಿಹಾಸಿಕ ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟಾರೆ 4 ಇನ್ನಿಂಗ್ಸ್ಗಳಲ್ಲಿ ಅವರು 245 ರನ್ ಗಳಿಸಿದ್ದರು.
ಯಾವುದೇ ಕ್ರೀಡಾಪಟು ತಂಡದ ಗೆಲುವಿಗಾಗಿ ನೀಡಿದ ಕೊಡುಗೆಯೇ ಅವನಿಗೆ ಸಿಗುವ ಅತ್ಯಂತ ದೊಡ್ಡ ಪ್ರಶಸ್ತಿಯಾಗಿದೆ. ಐಸಿಸಿ ಈ ರೀತಿಯ ಹೊಸ ಉಪಕ್ರಮ ಪ್ರಾರಂಭಿಸಿರುವುದರಿಂದ ಪ್ರತಿ ಬಾರಿಯೂ ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನಂತಹ ಯುವಕರನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ ಎಂದು ಪ್ರಶಸ್ತಿಗೆ ಪಾತ್ರರಾಗಿರುವ ರಿಷಭ್ ಪಂತ್ ಹೇಳಿದ್ದಾರೆ.