ಗಯಾನ: ವಿಂಡೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರಿಷಭ್ ಪಂತ್ ಟಿ-20 ಕ್ರಿಕೆಟ್ನಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾದರು.
ಭವಿಷ್ಯದ ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಡುತ್ತಿರುವ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಟಿ-20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ 0 ಹಾಗೂ 4 ರನ್ಗಳಿಗೆ ಔಟ್ ಆಗಿದ್ದರು. ಎರಡು ಪಂದ್ಯಗಳ ಕಳಪೆ ಪ್ರದರ್ಶನ ನೀಡಿದ ಮೇಲೆ ಪಂತ್ ವಿರುದ್ಧ ಟೀಕೆಗಳು ಬರಲಾರಂಭಿಸಿದ್ದವು. ಆದರೆ, ಮೂರನೇ ಪಂದ್ಯದಲ್ಲಿ 65 ರನ್ ಸಿಡಿಸುವ ಮೂಲಕ ಟೀಕೆಗಳಿಗೆ ಬ್ಯಾಟ್ನಿಂದಲೇ ಉತ್ತರಿಸಿದ್ದಾರೆ.