ರಾಜ್ಕೋಟ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಹಿಂದುಗಡೆ ಮಿಂಚಿನ ಸ್ಟಂಪಿಂಗ್ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
33 ರನ್ಗಳಿಕೆ ಮಾಡಿದ್ದ ಕಾಂಗರೂ ತಂಡದ ಆ್ಯರೋನ್ ಫಿಂಚ್ ಮುಂದುಗಡೆ ಹೋಗಿ ಬ್ಯಾಟ್ ಮಾಡುವ ಯತ್ನ ನಡೆಸಿದ್ರು. ಈ ವೇಳೆ ವಿಕೆಟ್ ಕೀಪಿಂಗ್ ಮಾಡ್ತಿದ್ದ ರಾಹುಲ್ ಕ್ಷಣಮಾತ್ರದಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿ ಅವರ ವಿಕೆಟ್ ಕಿತ್ತಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ನೆಟಿಜನ್ಸ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನ ಟ್ರೋಲ್ ಮಾಡಿದ್ದಾರೆ.