ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ಸರಣಿಗೂ ಮುನ್ನ ಧೋನಿ ಜತೆ ಸೇರಿ ಸಮಯ ಕಳೆಯುತ್ತಿರುವ ರಿಷಭ್ ಪಂತ್ - ಭಾರತ ಇಂಗ್ಲೆಂಡ್ ಟೆಸ್ಟ್​ ಸರಣಿ

ಸದಾ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿರುವ ಸಾಕ್ಷಿ ಧೋನಿ ಅವರ ವಿಶೇಷ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡುತ್ತಿರುತ್ತಾರೆ. ಈಗಾಗಲೇ ಪಂತ್​ ಮತ್ತು ಧೋನಿ ಜೊತೆಗಿರುವ ಈ ಫೋಟೋವನ್ನ 3 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ..

Rishabh Pant spends time with MS Dhoni
ಧೋನಿ ಪಂತ್

By

Published : Jan 26, 2021, 8:11 PM IST

ರಾಂಚಿ: ಭಾರತ ತಂಡದ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಆಸೀಸ್​ ಪ್ರವಾಸ ಮುಗಿಸಿಕೊಂಡು ತವರಿಗೆ ಮರಳುತ್ತಿದ್ದಂತೆ ತಮ್ಮ ರೋಲ್​ ಮಾಡಲ್ ಆಗಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿ ಮಾಡಿ, ಅವರ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.

ಗಣರಾಜ್ಯೋತ್ಸವದ ದಿನದಂದು ಪಂತ್ ಧೋನಿ ಕುಟುಂಬದ ಜೊತೆ ಸೇರಿ ಸಮಯ ಕಳೆಯುತ್ತಿದ್ದು, ಈ ಫೋಟೋವನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್​ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಾಕ್ಷಿ ಶೇರ್​ ಮಾಡಿಕೊಂಡಿರುವ ಫೋಟೋದಲ್ಲಿ ಧೋನಿ ಹೊಸ ಲುಕ್​ನಲ್ಲಿ ಕಾಣುತ್ತಿದ್ದು, ರಿಷಭ್ ಪಂತ್ ಕೆಂಪು ಟೀ ಶರ್ಟ್​ ಧರಿಸಿದ್ದಾರೆ. ಈ ಫೋಟೋಗೆ 'ಮಿಸ್ಸಿಂಗ್​ ಯು ಗಾಯ್ಸ್​' ಎಂದು ಕ್ಯಾಪ್ಷನ್ ನೀಡಿರುವ ಸಾಕ್ಷಿ, ಧೋನಿ ಸ್ನೇಹಿತರಾದ ಕನ್ವೀರ್ ಮತ್ತು ಕಬೀರ್ ಬಾಹಿಯಾರನ್ನು ಟ್ಯಾಗ್ ಮಾಡಿದ್ದಾರೆ.

ಸದಾ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿರುವ ಸಾಕ್ಷಿ ಧೋನಿ ಅವರ ವಿಶೇಷ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡುತ್ತಿರುತ್ತಾರೆ. ಈಗಾಗಲೇ ಪಂತ್​ ಮತ್ತು ಧೋನಿ ಜೊತೆಗಿರುವ ಈ ಫೋಟೋವನ್ನ 3 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ಪಂತ್​ ಅದ್ಭುತ ಪ್ರದರ್ಶನ ತೋರಿದ್ದರು. ಅದರಲ್ಲೂ ಬ್ರಿಸ್ಬೇನ್​ನಲ್ಲಿ ನಡೆದಿದ್ದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸಿ 32 ವರ್ಷಗಳ ನಂತರ ಗಬ್ಬಾದಲ್ಲಿ ಆಸ್ಟ್ರೇಲಿಯನ್ನರು ಸೋಲು ಕಾಣುವಂತೆ ಮಾಡಿದ್ದರು.

ABOUT THE AUTHOR

...view details