ಮುಂಬೈ: ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಇಂದು 22ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದಾರೆ. ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಸೇರಿ ಕ್ರಿಕೆಟ್ ದಿಗ್ಗಜರು ಶುಭಾಶಯ ಕೋರಿದ್ದಾರೆ.
ಭಾರತದ ಭವಿಷ್ಯದ ಸ್ಟಾರ್, ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ ಯುವ ಕ್ರಿಕೆಟಿಗ ಪಂತ್ ಸದ್ಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ಪರ ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಏಳು-ಬೀಳುಗಳನ್ನು ಕಂಡಿರುವ ಪಂತ್ ಐಪಿಎಲ್ನಲ್ಲಿ ಮಾತ್ರ ಡೆಲ್ಲಿ ತಂಡದ ಆಧಾರ ಸ್ತಂಬಗಳಲ್ಲಿ ಒಬ್ಬರಾಗಿದ್ದಾರೆ.
ಇಂದು 23ನೇ ವಸಂತಕ್ಕೆ ಕಾಲಿಟ್ಟ ಪಂತ್ಗೆ ಸಿಕ್ಸರ್ ಸರದಾರ ಯುವರಾಜ್ ಸಿಂಗ್, ಇವನ ಹೆಸರು ಪಂತ್, ಆದರೆ ಈತ ಮಾಡೋ ಕೆಲಸ ಚಡ್ಡಿ ಹಾಕೊಳ್ಳೋ ಮಕ್ಕಳು ಮಾಡೋ ಕೆಲ್ಸ", ಎಂದು ತಮಾಷೆಯಾಗಿ ಬರೆದು ರಿಷಭ್ಗೆ ಶುಭಾಯಶ ಕೋರಿದ್ದು, ಐಪಿಎಲ್ನಲ್ಲಿ ಯಶಸ್ವಿಯಾಗಲೆಂದು ಹರಸಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಸುರೇಶ್ ರೈನಾ, ನಿತೀಶ್ ರಾಣಾ, ಮೊಹ್ಮದ್ ಕೈಫ್ ಸೇರಿ ಹಲವಾರು ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. 2017ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಪಂತ್, 13 ಟೆಸ್ಟ್, 16 ಏಕದಿನ ಹಾಗೂ 27 ಟಿ20 ಪಂದ್ಯಗಳನ್ನಾಡಿದ್ದಾರೆ. ಇವರು ಕ್ರಮವಾಗಿ, 814, 374 ಹಾಗೂ 410 ರನ್ಗಳಿಸಿದ್ದಾರೆ.