ಕಿಂಗ್ಸ್ಟನ್:ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಟೆಸ್ಟ್ ಸರಣಿ ಕ್ಲೀನ್ಸ್ವೀಪ್ ಮಾಡುವ ಹುಮ್ಮಸ್ಸಿನಲ್ಲಿದೆ. ಇದೇ ಸರಣಿಯಲ್ಲಿ ಇದೀಗ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಹಿರಿಯ ಆಟಗಾರ ಧೋನಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಇಶಾಂತ್ ಶರ್ಮ ಎಸೆತದಲ್ಲಿ ಕ್ರೆಗ್ ಬ್ರಾತ್ವೈಟ್ ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್ ವಿಕೆಟ್ ಹಿಂದೆ ವೇಗವಾಗಿ ಐವತ್ತು ಬಲಿ ಪಡೆದ ಸಾಧನೆ ಮಾಡಿದ್ದಾರೆ. ಪಂತ್ ಈ ಸಾಧನೆ ಕೇವಲ 11 ಟೆಸ್ಟ್ನಲ್ಲಿ ಮೂಡಿಬಂದಿದೆ.
ಸರಣಿ ಕ್ಲೀನ್ ಸ್ವೀಪ್ನತ್ತ ಕೊಹ್ಲಿ ಪಡೆ ಚಿತ್ತ... ಆತಿಥೇಯರ ಮುಂದಿದೆ ಬೃಹತ್ ಗುರಿ!