ದುಬೈ :ಭಾರತ ತಂಡದ ಆಲ್ರೌಂಡರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ ಐಪಿಎಲ್ ತ್ಯಜಿಸಿದ್ದಾರೆಂದು ಈಗಾಗಲೇ ಸುದ್ದಿಯಾಗಿದೆ. ಆದರೆ, ರೈನಾ ಚೆನ್ನೈ ತಂಡದಿಂದ ಹೊರಬರಲು ಕಾರಣ ಒಂದು ಹೋಟೆಲ್ ರೂಮ್ ಎಂಬ ವಿಚಾರ ಕೂಡ ಕೇಳಿ ಬರುತ್ತಿದೆ.
ಮೂಲಗಳ ಪ್ರಕಾರ ಹೋಟೆಲ್ನಲ್ಲಿ ಸಿಎಸ್ಕೆ ನಾಯಕ ಧೋನಿಗೆ ನೀಡಿದ್ದ ಸೌಲಭ್ಯವುಳ್ಳ ರೂಮನ್ನು ತಮಗೆ ನೀಡಿಲ್ಲದ್ದಕ್ಕೆ ರೈನಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರೆಂದು ತಿಳಿದು ಬಂದಿದೆ. ಆದರೆ, ಸಿಎಸ್ಕೆ ಸಿಇಒ ವಿಶ್ವನಾಥನ್ ವೈಯಕ್ತಿಕ ಕಾರಣದಿಂದ ರೈನಾ ಭಾರತಕ್ಕೆ ಮರಳುತ್ತಿದ್ದಾರೆ ಎಂದು ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಸ್ಕೆ ಮಾಲೀಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್, ಎಂಎಸ್ ಧೋನಿ ತಂಡದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ. ಧೋನಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಅಂತಾ ಹೇಳಿರುವ ಶ್ರೀನಿವಾಸನ್, ರೈನಾ ಅವರು ಹೋಟೆಲ್ ರೂಮಿಗಾಗಿ ಅಸಮಾಧಾನಗೊಂಡ ವಿಚಾರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.