ಲಂಡನ್:ಕೇವಲ ಬೌಂಡರಿಗಳ ಆಧಾರದ ಮೇಲೆ ವಿಶ್ವಕಪ್ನಂತಹ ಮಹಾನ್ ಟೂರ್ನಮೆಂಟ್ನಲ್ಲಿ ವಿಜೇತರನ್ನು ಪರಿಗಣಿಸಿರುವುದಕ್ಕೆ ಕ್ರಿಕೆಟ್ ವಲಯದಲ್ಲಿ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರಿಂದ ಅಸಮಾಧಾನ ವ್ಯಕ್ತವಾಗಿದೆ.
ನಿನ್ನೆ ವಿಶ್ವಕಪ್ನ ಫೈನಲ್ನಲ್ಲಿ ಕಿವೀಸ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ವಿಜೇತರಿಗಾಗಿ ಟಿ-20 ಯಲ್ಲಿ ಅನುಸರಿಸುವ ಸೂಪರ್ ಓವರ್ ಆಡಿಸಲಾಯಿತು. ಆದರೆ, ಸೂಪರ್ ಓವರ್ನಲ್ಲಿಯೂ ಟೈ ಆಗಿದ್ದರಿಂದ ಹೆಚ್ಚು ಬೌಂಡರಿಗಳಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು. ಆದರೆ, ಈ ನಿಯಮವನ್ನು ಇಡೀ ಕ್ರಿಕೆಟ್ ಲೋಕವೇ ತಿರಸ್ಕಾರದಿಂದ ನೋಡಿದ್ದು, ಹಲವು ಮಾಜಿ ಕ್ರಿಕೆಟಿಗರು ಐಸಿಸಿ ನಿಯಮದ ವಿರುದ್ಧ ಕಿಡಿಕಾರಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಕಿವೀಸ್ ತನ್ನ ಇನ್ನಿಂಗ್ಸ್ನಲ್ಲಿ ಸೂಪರ್ ಓವರ್ ಸೇರಿದಂತೆ 17 ಬೌಂಡರಿಗಳಿಸಿತ್ತು. ಇತ್ತ ಚೇಸಿಂಗ್ ನಡೆಸಿದ್ದ ಇಂಗ್ಲೆಂಡ್ ಸೂಪರ್ ಓವರ್ ಸೇರದಂತೆ 26 ಬೌಂಡರಿ ಸಿಡಿಸಿತ್ತು. ಇದರ ಆದಾರದ ಮೇಲೆ ಇಂಗ್ಲೆಂಡ್ ಮೇಲುಗೈ ಸಾಧಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿತು.
ಆದರೆ, ಈ ನಿಯಮವನ್ನು ಪ್ರಶ್ನಿಸಿರುವ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್" ವಿಜೇತರನ್ನು ಘೋಷಿಸಲು ಐಸಿಸಿ ಹೆಚ್ಚು ಬೌಂಡರಿ ಬಾರಿಸಿದ ವಿಧಾನವನ್ನು ಅನುಸರಿಸಿದ್ದು ನನಗೆ ಅರ್ಥವಾಗುತ್ತಿಲ್ಲ. ಇದೊಂದು ಹಾಸ್ಯಸ್ಪದ ನಿಯಮ. ನನ್ನ ಪ್ರಕಾರ ಎರಡು ತಂಡಗಳೂ ಚಾಂಪಿಯನ್ನ ಎಂದು ಟ್ವೀಟ್ ಮಾಡಿದ್ದಾರೆ.