ಅಡಿಲೇಡ್:ಸದ್ಯ ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾಜಿ ಆಸೀಸ್ ಆಟಗಾರ ರಿಕಿ ಪಾಂಟಿಂಗ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಭಾರತದ ಪಿಚ್ಗಳು ಸ್ಪಿನ್ನರ್ ಸ್ನೇಹಿ ಎಂದೇ ಬಿಂಬಿತವಾಗಿದ್ದರೂ ಇತ್ತೀಚೆಗೆ ಮುಕ್ತಾಯವಾದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತೀಯ ವೇಗಿಗಳು ಎಲ್ಲ ವಿಕೆಟ್ ಕಿತ್ತು ಪಾರಮ್ಯ ಮೆರೆದಿದ್ದರು. ಇದು ಭಾರತೀಯ ವೇಗದ ಬೌಲಿಂಗ್ ವಿಭಾಗದ ಸಾಮರ್ಥ್ಯವನ್ನು ಸಾರಿ ಹೇಳಿತ್ತು.
ಸದ್ಯ ಪಾಕ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯವಾದ ಬಳಿಕ ತಮ್ಮ ಹಾಗೂ ಭಾರತ ತಂಡದ ನಡುವಿನಲ್ಲಿ ತಮ್ಮ ತಂಡದ ಬೌಲಿಂಗ್ ವಿಭಾಗವೇ ಕೊಂಚ ಮೇಲುಗೈ ಹೊಂದಿದೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತದಲ್ಲಿ ಬುಮ್ರಾ,ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ ಬೌಲಿಂಗ್ ಕಳೆದ ಕೆಲ ವರ್ಷಗಳಲ್ಲಿ ಅತ್ಯಂತ ಉತ್ತಮವಾಗಿದೆ. ಇದೇ ವಿಭಾಗಕ್ಕೆ ಅಶ್ವಿನ್ ಹಾಗೂ ಜಡೇಜಾರನ್ನು ಸೇರಿಸಿದರೆ ಭಾರತದ ಬೌಲಿಂಗ್ ಅತ್ಯದ್ಭುತ ಎನ್ನುತ್ತಾರೆ ರಿಕಿ ಪಾಂಟಿಂಗ್.
ಆದರೆ, ಇದೇ ಭಾರತೀಯ ಸ್ಪಿನ್ನರ್ಗಳು ಆಸ್ಟ್ರೇಲಿಯಾಗೆ ಬಂದರೆ ಕೊಂಚ ಮಂಕಾಗುತ್ತಾರೆ. ಆಸೀಸ್ ಸ್ಪಿನ್ನರ್ ನಥನ್ ಲಯಾನ್ ತಮ್ಮ ನೆಲದಲ್ಲಿ ಭಾರತೀಯ ಸ್ಪಿನ್ನರ್ಗಿಂತ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಈ ಎಲ್ಲ ಕಾರಣಕ್ಕೆ ಆಸ್ಟ್ರೇಲಿಯಾ ಬೌಲಿಂಗ್ ವಿಭಾಗ ಭಾರತಕ್ಕಿಂತ ಹೆಚ್ಚಿನ ಬಲ ಹೊಂದಿದೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.